ಭಾರತೀಯ ಕಂಪೆನಿಗಳ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರ್ಲಿನ್‌ನಲ್ಲಿ ತರಬೇತಿಯನ್ನು ನೀಡಲು ಭಾರತ -ಜರ್ಮನಿಗಳು ಒಪ್ಪಂದ ಮಾಡಿಕೊಂಡಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೊದಲ ಹಂತದಲ್ಲಿ ಭಾರತೀಯ ಕಂಪೆನಿಗಳ 50 ಹಿರಿಯ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲು ಸಮ್ಮತಿ ಸೂಚಿಸಿದ್ದು ತಿಳಿವಳಿಕೆ ಪತ್ರಕ್ಕೆ ಕೇಂದ್ರ ವಾಣಿಜ್ಯ ಸಚಿವ ಕಮಲನಾಥ್ ಮತ್ತು ಜರ್ಮನಿಯ ಕೈಗಾರಿಕೆ ಮತ್ತು ತಂತ್ರಜ್ಞಾನ ಸಚಿವ ಮಿಖೈಲ್ ಗ್ಲೊಸ್ ಸಹಿ ಹಾಕಿದ್ದಾರೆ.
ಜರ್ಮನಿಯ ಕಂಪೆನಿಗಳಲ್ಲಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡುವ ಯೋಜನೆಯನ್ನು ಹೊಂದಿವೆ ಎಂದು ಮೂಲಗಳು ತಿಳಿಸಿವೆ.
ಭಾರತ ಯುರೋಪ್ ಮುಕ್ತ ವ್ಯಾಪಾರ ಒಪ್ಪಂದ ಹಾಗೂ ದೋಹಾ ಡಬ್ಲೂಟಿಒ ಸಂಧಾನ ಕುರಿತಂತೆ ಉಭಯ ಸಚಿವರು ಚರ್ಚಿಸಿದರು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ದ್ವಿಪಕ್ಷೀಯ ಸಹಕಾರ ಕುರಿತಂತೆ ಚರ್ಚಿಸಿದ ಸಚಿವರುಗಳು ಜರ್ಮನಿಯ ಉದ್ಯಮಿಗಳಿಂದ ಭಾರತದಲ್ಲಿ ಹೂಡಿಕೆ ಹಾಗೂ ಭಾರತದ ಉದ್ಯಮಿಗಳಿಂದ ಜರ್ಮನಿಯಲ್ಲಿ ಹೂಡಿಕೆ ಕುರಿತಂತೆ ಚರ್ಚಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
|