ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾರ್ಸನ್‌ಗೆ 723ಕೋಟಿ ಗುತ್ತಿಗೆ
ಬ್ರೆಜಿಲ್ ತೈಲ ಉತ್ಪಾದಕ ಕಂಪೆನಿ ಪೆಟ್ರೋಬ್ರಾಸ್ ಕಂಪೆನಿಯ ತೈಲ ಸಂಸ್ಕರಣ ಘಟಕಕ್ಕೆ ಉಪಕರಣಗಳನ್ನು ಸರಬರಾಜು ಮಾಡಲು ಲಾರ್ಸನ್ ಆಂಡ್ ಟರ್ಬೊ ಇಂಜಿನಿಯರಿಂಗ್ ವಿಭಾಗಕ್ಕೆ 723ಕೋಟಿ ರೂ.ಗುತ್ತಿಗೆ ನೀಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಹೈಡ್ರೋ ಟ್ರಿಟಿಂಗ್ ರಿಯಾಕ್ಟರ್ ಮತ್ತು ಕೋಕ್ ಡ್ರಮ್ಸ್‌‌ಗಳನ್ನು ಉತ್ಪಾದಿಸಿ, ಬ್ರೆಜಿಲ್‌ನಲ್ಲಿರುವ ಪೆಟ್ರೋಬ್ರಾಸ್ ಸಂಸ್ಕರಣ ಘಟಕಕ್ಕೆ ಸರಬರಾಜು ಮಾಡಲು 723ಕೋಟಿ ರೂಪಾಯಿಗಳ ಗುತ್ತಿಗೆಯನ್ನು ನೀಡಿದೆ ಎಂದು ಎಲ್‌ ಆಂಡ್ ಟಿ, ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.

ಮುಂಬರುವ 2010-11ರ ಆರ್ಥಿಕ ಸಾಲಿನಲ್ಲಿ ಬ್ರೆಜಿಲ್‌ನಲ್ಲಿರುವ ಪೆಟ್ರೋಬ್ರಾಸ್ ಸಂಸ್ಕರಣ ಘಟಕಕ್ಕೆ ರಿಯಾಕ್ಟರ್‌ಗಳನ್ನು ಸರಬರಾಜು ಮಾಡಲಾಗುವುದು ಎಂದು ಕಂಪೆನಿ ತಿಳಿಸಿದೆ.

ಹೈಡ್ರೋಕಾರ್ಬನ್‌ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ ಹಾಜಿರಾದಲ್ಲಿ ಉತ್ಪಾದಕ ಘಟಕವನ್ನು ವಿಸ್ತರಿಸಲಾಗಿದ್ದು, ಒಮನ್ ದೇಶದಲ್ಲಿ ಫ್ಯಾಬ್ರಿಕೇಶನ್ ಘಟಕ ಇನ್ನೂ ನಿರ್ಮಾಣದ ಹಂತದಲ್ಲಿದೆ ಎಂದು ಕಂಪೆನಿ ತಿಳಿಸಿದೆ.
ಮತ್ತಷ್ಟು
ಭಾರತದ ಅಧಿಕಾರಿಗಳಿಗೆ ಬರ್ಲಿನ್‌ನಲ್ಲಿ ತರಬೇತಿ
ಜಿಎಸ್‌ಎಂ ಬಿಡ್‌ಗೆ ಆರು ಕಂಪೆನಿಗಳು:ಬಿಎಸ್‌ಎನ್‌ಎಲ್
ಎಚ್‌ಡಿಎಫ್‌ಸಿಯಿಂದ ರಿಯಲ್ ಎಸ್ಟೇಟ್ ಮ್ಯೂಚವಲ್ ಫಂಡ್
ಗುಜರಾತ್: ಕೈಗಾರಿಕೆಗಳಿಗೆ ಶೇ.30 ವಿದ್ಯುತ್ ಕಡಿತ
ಹಣಕಾಸು ವಲಯ ಸುಧಾರಣೆಗೆ ಬಿಗಿ ಕ್ರಮ: ಆರ್‌ಬಿಐ
ರೂಪಾಯಿ ಮೌಲ್ಯ ಮತ್ತೆ ಕುಸಿತ