ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪುಣೆ ಘಟಕದಿಂದ 1 ಸಾವಿರ 'ನ್ಯಾನೋ' ಮಾರುಕಟ್ಟೆಗೆ
ಟಾಟಾ ಮೋಟಾರ್ಸ್ 1ಸಾವಿರ ನ್ಯಾನೋ ಕಾರುಗಳನ್ನು ಪುಣೆಯ ಘಟಕದಲ್ಲಿ ಉತ್ಪಾದಿಸಲು ಸಿದ್ದತೆ ನಡೆಸಿದ್ದು ಒಂದೆರಡು ದಿನಗಳಲ್ಲಿ ಕಾರಿನ ಬಿಡಿಭಾಗಗಳು ಘಟಕಕ್ಕೆ ವಿತರಿಸಲಾಗುತ್ತಿದೆ ಎಂದು ಟಾಟಾ ಮೂಲಗಳು ತಿಳಿಸಿವೆ.

ಟಾಟಾ ಮೋಟಾರ್ಸ್, ಸಿಂಗೂರ್‌ನಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನ್ಯಾನೋ ಕಾರನ್ನು ಮುಂಬರುವ ಅಕ್ಟೋಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ತರಲು ಸಿದ್ದತೆ ನಡೆಸಿದೆ. 15 ದಿನಗಳಲ್ಲಿ ಸಿಂಗೂರ್ ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ನ್ಯಾನೋ ಘಟಕವನ್ನು ಇತರ ಟಾಟಾ ಮೋಟಾರ್ಸ್‌ನ ಘಟಕಗಳಿಗೆ ಸ್ಥಳಾಂತರಿಸಲಾಗುವುದು ಎಂದು ಟಾಟಾ ಮೂಲಗಳು ತಿಳಿಸಿವೆ.

ಟಾಟಾ ಮೋಟಾರ್ಸ್ 55 ವಿತರಿಕರಿಗೆ 1ಸಾವಿರ ನ್ಯಾನೋ ಕಾರುಗಳಿಗಾಗಿ ಬಿಡಿಭಾಗಗಳನ್ನು ಪುಣೆಯ ಘಟಕಕ್ಕೆ ಸೆಪ್ಟೆಂಬರ್ 8 ರೊಳಗಾಗಿ ವಿತರಿಸುವಂತೆ ಮಾಹಿತಿ ನೀಡಿತ್ತು ಎಂದು ನ್ಯಾನೋ ಕಾರಿನ ಇಂಜಿನ್‌ಗಳಿಗೆ ಉಕ್ಕಿನ ಹೊದಿಕೆಗಳನ್ನು ಒದಗಿಸುವ ಪ್ರಮುಖ ವಿತರಕರು ತಿಳಿಸಿದ್ದಾರೆ.

ಒಂದು ನ್ಯಾನೋ ಕಾರನ್ನು ತಯಾರಿಸಲು 3ಸಾವಿರ ಬಿಡಿಭಾಗಗಳ ಅವಶ್ಯಕತೆಯಿದ್ದು, ಮುಂಬರುವ ಎರಡು ಅಥವಾ ಮೂರು ವರ್ಷಗಳಲ್ಲಿ ಪುಣೆಯ ಏಕಮಾತ್ರ ಘಟಕದಿಂದ ತಯಾರಿಸಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯವನ್ನು ವಿತರಕರು ವ್ಯಕ್ತಪಡಿಸಿದ್ದಾರೆ.

ನ್ಯಾನೋ ಕುರಿತಂತೆ ಯಾವುದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡಲು ಬಯಸುವುದಿಲ್ಲ ಎಂದು ಟಾಟಾ ಮೋಟಾರ್ಸ್ ವಕ್ತಾರರು ತಿಳಿಸಿದ್ದಾರೆ.
ಮತ್ತಷ್ಟು
ಹಣದುಬ್ಬರ ಶೇ.12.1ರಷ್ಟು ಕುಸಿತ
ದೇಶದಲ್ಲಿ ಉಕ್ಕಿನ ಘಟಕಗಳ ಸ್ಥಾಪನೆ : ಮಿತ್ತಲ್
90ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಗುರಿ-ಶಿಂಧೆ
ಲಾರ್ಸನ್‌ಗೆ 723ಕೋಟಿ ಗುತ್ತಿಗೆ
ಭಾರತದ ಅಧಿಕಾರಿಗಳಿಗೆ ಬರ್ಲಿನ್‌ನಲ್ಲಿ ತರಬೇತಿ
ಜಿಎಸ್‌ಎಂ ಬಿಡ್‌ಗೆ ಆರು ಕಂಪೆನಿಗಳು:ಬಿಎಸ್‌ಎನ್‌ಎಲ್