ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ಫೋಸಿಸ್‌ ಬಂಡವಾಳ ಹೂಡಿಕೆಗೆ ಸಹಕಾರ: ಬುದ್ದ
ಸಿಂಗೂರ್ ವಿವಾದ ಕುರಿತಂತೆ ತನ್ನ 500 ಕೋಟಿ ಹೂಡಿಕೆಯ ಯೋಜನೆಗಳನ್ನು ಮರುಪರಿಶೀಲನೆ ನಡೆಸುವುದಾಗಿ ಮಾಹಿತಿ ತಂತ್ರಜ್ಞಾನದ ದಿಗ್ಗಜ ಕಂಪೆನಿ ಇನ್ಫೋಸಿಸ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ಸರಕಾರ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದೆ.

ನನ್ನ ಇಲಾಖೆ ಇನ್ಫೋಸಿಸ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ದೇಬೆಶ್ ದಾಸ್ ಹೇಳಿದ್ದಾರೆ.

ಇನ್ಫೋಸಿಸ್ ಅಡಳಿತ ಮಂಡಳಿಯ ಸದಸ್ಯರಾದ ಟಿ.ವಿ. ಮೋಹನದಾಸ್ ಪೈ ಅವರು ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ಹೂಡಿಕೆ ಮಾಡುವ ಯೋಜನೆಯನ್ನು ಮರುಪರಿಶೀಲಿಸುತ್ತಿದ್ದು, ಉದ್ಯೋಗಿಗಳ ಸುರಕ್ಷತೆಯ ಹಿನ್ನೆಲೆಯಲ್ಲಿ ಮರುಪರಿಶೀಲನೆ ಅಗತ್ಯವಾಗಿದೆ ಎಂದು ಹೇಳಿದರು.

ಇದಕ್ಕಾಗಿ ಸರಕಾರ 90 ಏಕರೆ ಭೂಮಿಯನ್ನು ನೀಡುವ ಭರವಸೆಯನ್ನು ನೀಡಿದ್ದರಿಂದ ಸಾಫ್ಟವೇರ್ ರಂಗದ ದಿಗ್ಗಜ ಕಂಪೆನಿಯಾದ ಇನ್ಫೋಸಿಸ್ ಕಂಪೆನಿ, ಕೋಲ್ಕತಾದಲ್ಲಿ 500 ಕೋಟಿ ವೆಚ್ಚದಲ್ಲಿ ಕ್ಯಾಂಪಸ್‌ ನಿರ್ಮಿಸಲಿದ್ದು,5ಸಾವಿರ ಉದ್ಯೋಗಿಗಳಿಗೆ ಅವಕಾಶ ದೊರೆಯುಲಿದೆ ಎಂದು ಇನ್ಫೋಸಿಸ್ ಹೇಳಿಕೆ ನೀಡಿರುವುದನ್ನು ಸ್ಮರಿಸಬಹುದು.

ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಜಿಯವರು ಮಾತನಾಡಿ ಮಾಹಿತಿ ತಂತ್ರಜ್ಞಾನ ಸಚಿವ ದೆಬೆಶ್ ಅವರಿಗೆ ಇನ್ಫೋಸಿಸ್ ಅಡಳಿತ ಮಂಡಳಿಯೊಂದಿಗೆ ಸಂಪರ್ಕಿಸುವಂತೆ ಆದೇಶ ನೀಡಿದ್ದು, ಇನ್ಫೋಸಿಸ್ ಕಾರ್ಯ ಆರಂಭಿಸಿದಲ್ಲಿ ಯಾವುದೇ ಅಡೆತಡೆಗಳು ಎದುರಾಗುವುದಿಲ್ಲ ಎನ್ನುವ ಭರವಸೆಯನ್ನು ನೀಡುವಂತೆ ಹೇಳಿದ್ದೇನೆ ಎಂದು ತಿಳಿಸಿದರು.
ಮತ್ತಷ್ಟು
ಪುಣೆ ಘಟಕದಿಂದ 1 ಸಾವಿರ 'ನ್ಯಾನೋ' ಮಾರುಕಟ್ಟೆಗೆ
ಹಣದುಬ್ಬರ ಶೇ.12.1ರಷ್ಟು ಕುಸಿತ
ದೇಶದಲ್ಲಿ ಉಕ್ಕಿನ ಘಟಕಗಳ ಸ್ಥಾಪನೆ : ಮಿತ್ತಲ್
90ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಗುರಿ-ಶಿಂಧೆ
ಲಾರ್ಸನ್‌ಗೆ 723ಕೋಟಿ ಗುತ್ತಿಗೆ
ಭಾರತದ ಅಧಿಕಾರಿಗಳಿಗೆ ಬರ್ಲಿನ್‌ನಲ್ಲಿ ತರಬೇತಿ