ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ-ಅಮೆರಿಕ ರಫ್ತು ವಹಿವಾಟಿನಲ್ಲಿ ದ್ವಿಗುಣ
ಕಳೆದ ಆರು ವರ್ಷಗಳ ಹಿಂದೆ ಭಾರತ ಮತ್ತು ಅಮೆರಿಕ ರಫ್ತು ವಹಿವಾಟು 8.5 ಬಿಲಿಯನ್ ಡಾಲರ್‌ಗಳಾಗಿದ್ದು, 2007ರಲ್ಲಿ 18.85ಬಿಲಿಯನ್ ಡಾಲರ್‌ಗಳಿಗೆ ತಲುಪಿ ವಹಿವಾಟಿನಲ್ಲಿ ದ್ವಿಗುಣವಾಗಿ ಪ್ರಸಕ್ತ ವರ್ಷ 50 ಬಿಲಿಯನ್ ಡಾಲರ್‌ಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ಭಾರತದಿಂದ ಅಮೆರಿಕೆಗೆ ರಫ್ತಿನ ವಹಿವಾಟಿನಲ್ಲಿ ಶೇ.15ರಷ್ಟು ಹೆಚ್ಚಳವಾಗಿದ್ದು, 2001ರಿಂದ 2007ರ ವರೆಗೆ 18.85 ಡಾಲರ್‌ಗಳಾಗಿವೆ ಎಂದು ವಾಣಿಜ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನಿಲ್ ಮುಕಿಮ್ ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ, ಕೆಮಿಕಲ್ಸ್ , ಫಾರ್ಮಾ ಸೇರಿದಂತೆ ಉನ್ನತ 10 ಕ್ಷೇತ್ರಗಳ ರಫ್ತುವಹಿವಾಟು ಹೆಚ್ಚಳವಾಗಿದ್ದರಿಂದ ಭಾರತ-ಅಮೆರಿಕ ರಫ್ತುವಹಿವಾಟು ಪ್ರಸಕ್ತ ವರ್ಷ40 ಬಿಲಿಯನ್ ಡಾಲರ್‌ಗಳಾಗಿದ್ದು 2008ರ ಅಂತ್ಯಕ್ಕೆ 50 ಬಿಲಿಯನ್ ಡಾಲರ್‌ಗಳಾಗಲಿದೆ ಎಂದು ಹೇಳಿದ್ದಾರೆ.

ಪ್ರಮುಖವಾಗಿ ವಜ್ರಾಭರಣ,ಜವಳಿ ವಸ್ತುಗಳನ್ನು ಭಾರತ ಅಮೆರಿಕೆಗೆ ರಫ್ತು ಮಾಡುತ್ತಿದೆ.ಕೆಮಿಕಲ್ಸ್ , ಫಾರ್ಮಾ, ಮಶಿನರಿ, ಸಾಗರೋತ್ಪನ್ನ ಅಹಾರಗಳು, ವಾಹನಗಳ ಬಿಡಿ ಭಾಗಗಳು ಗೃಹಪಯೋಗಿ

ವಸ್ತುಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಭಾರತ ಅಮೆರಿಕೆಗೆ ರಫ್ತು ಮಾಡುತ್ತಿದೆ ಎಂದು ಮುಕಿಮ್ ವಿವರಿಸಿದರು.
ಮತ್ತಷ್ಟು
ಇನ್ಫೋಸಿಸ್‌ ಬಂಡವಾಳ ಹೂಡಿಕೆಗೆ ಸಹಕಾರ: ಬುದ್ದ
ಪುಣೆ ಘಟಕದಿಂದ 1 ಸಾವಿರ 'ನ್ಯಾನೋ' ಮಾರುಕಟ್ಟೆಗೆ
ಹಣದುಬ್ಬರ ಶೇ.12.1ರಷ್ಟು ಕುಸಿತ
ದೇಶದಲ್ಲಿ ಉಕ್ಕಿನ ಘಟಕಗಳ ಸ್ಥಾಪನೆ : ಮಿತ್ತಲ್
90ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಗುರಿ-ಶಿಂಧೆ
ಲಾರ್ಸನ್‌ಗೆ 723ಕೋಟಿ ಗುತ್ತಿಗೆ