ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೃಷಿ ಹೂಡಿಕೆ ಇಳಿಕೆಯಿಂದಾಗಿ ಅಹಾರ ಬಿಕ್ಕಟ್ಟು-ವಿಶ್ವಸಂಸ್ಥೆ
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾದ ಭಾರತ ಸೇರಿದಂತೆ ಇನ್ನಿತರ ದೇಶಗಳು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಹೂಡಿಕೆಯನ್ನು ನಿರ್ಲ್ಯಕ್ಷಿಸುತ್ತಿರುವುದರಿಂದ ಜಾಗತಿಕ ಹಸಿವಿಗೆ ಕಾರಣವಾಗಿದೆ ಎಂದು ವಿಶ್ವಸಂಸ್ಥೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಮಿಲೇನಿಯಂ ಡೆವಲೆಪ್‌ಮೆಂಟ್ ಗೋಲ್ಸ್‌-2008 ಎನ್ನುವ ವರದಿಯಲ್ಲಿ ಅಭಿವೃದ್ಧಿ ಹೊಂದಿದ ಹಾಗೂ ಹೊಂದುತ್ತಿರುವ ರಾಷ್ಟ್ರಗಳು ದೇಶಿಯ ಕೃಷಿಗೆ ನೀಡುತ್ತಿರುವ ಅನುದಾನ ತುಂಬಾ ಕಡಿಮೆ ಎಂದು ವಿಶ್ವಸಂಸ್ಥೆ ಪ್ರಕಟಿಸಿದೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಕಳೆದ ಕೆಲ ವರ್ಷಗಳಿಂದ ಕೃಷಿ ಉತ್ಪಾದನೆಯನ್ನು ನಿರ್ಲ್ಯಕ್ಷಿಸಿರುವುದು ಅನುದಾನದ ಕೊರತೆ, ದರ ನಿಯಂತ್ರಣ, ಕೃಷಿ ಅನುದಾನ ಕೊರತೆಗಳಿಂದಾಗಿ ಇಂದಿನ ಜಾಗತಿಕ ಅಹಾರ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಹೇಳಿದೆ.

ಪ್ರಸಕ್ತ ದಶಕದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಹೆಚ್ಚಿನ ಹೂಡಿಕೆ ಹಾಗೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡದಿದ್ದಲ್ಲಿ ಮುಂಬರುವ ದಿನಗಳಲ್ಲಿ ಎದುರಾಗುವ ಜಾಗತಿಕ ಅಹಾರ ಬಿಕ್ಕಟ್ಟು ತಕ್ಕ ಪಾಠ ಕಲಿಸಲಿದೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್‌-ಕಿ-ಮೂನ್ ತಿಳಿಸಿದ್ದಾರೆ.
ಮತ್ತಷ್ಟು
ಯುರೋಪ್‌ನಿಂದ ವಹಿವಾಟು ತಂತ್ರಜ್ಞಾನ ಕೇಂದ್ರ ಸ್ಥಾಪನೆ
ಭಾರತ-ಅಮೆರಿಕ ರಫ್ತು ವಹಿವಾಟಿನಲ್ಲಿ ದ್ವಿಗುಣ
ಇನ್ಫೋಸಿಸ್‌ ಬಂಡವಾಳ ಹೂಡಿಕೆಗೆ ಸಹಕಾರ: ಬುದ್ದ
ಪುಣೆ ಘಟಕದಿಂದ 1 ಸಾವಿರ 'ನ್ಯಾನೋ' ಮಾರುಕಟ್ಟೆಗೆ
ಹಣದುಬ್ಬರ ಶೇ.12.1ರಷ್ಟು ಕುಸಿತ
ದೇಶದಲ್ಲಿ ಉಕ್ಕಿನ ಘಟಕಗಳ ಸ್ಥಾಪನೆ : ಮಿತ್ತಲ್