ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
10 ಸಾವಿರ ಕೋಟಿ ವೆಚ್ಚದಲ್ಲಿ ಪರಮಾಣು ವಿದ್ಯುತ್ ಘಟಕ
ಜಿಎಂಆರ್ ಎನರ್ಜಿ ಕಂಪೆನಿ ಮುಂಬರುವ 5-7 ವರ್ಷಗಳಲ್ಲಿ 10 ಸಾವಿರ ಕೋಟಿ ವೆಚ್ಚದಲ್ಲಿ 2000-3000 ಮೆಘಾ ವ್ಯಾಟ್‌ ಪರಮಾಣು ವಿದ್ಯುತ್ ಘಟಕ ಸ್ಥಾಪನೆಗೆ ಸಿದ್ದತೆ ನಡೆಸಿದೆ ಎಂದು ಕಂಪೆನಿಯ ಪ್ರತಿನಿಧಿಗಳು ತಿಳಿಸಿದ್ದಾರೆ.

ಉಪಕರಣ ಹಾಗೂ ಇಂಧನ ಸರಬರಾಜುದಾರರೊಂದಿಗೆ ಮಾತುಕತೆಗಳನ್ನು ನಡೆಸಿದ್ದು, ಮುಂಬರುವ ವರ್ಷದೊಳಗಾಗಿ ಯೋಜನೆ ಸಿದ್ದವಾಗುತ್ತದೆ ಎಂದು ಜಿಎಂಆರ್ ಕಂಪೆನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅವಿನಾಶ್ ಆರ್. ಶಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಜಿಎಂಆರ್ ಎನರ್ಜಿ ಜಿಎಂಆರ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಅಂಗವಾಗಿದ್ದು, ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಶ್ರೀನಿವಾಸನ್ ಸೇರಿದಂತೆ ಸರಕಾರಿ ಸ್ವಾಮ್ಯದ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್‌‌ ತಜ್ಞರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಶಾ ತಿಳಿಸಿದ್ದಾರೆ.

ಪ್ರಸ್ತುತ ಯೋಜನೆ ಹಾಗೂ ಸಿದ್ದತೆಯ ಹಂತದಲ್ಲಿದೆ. ಮುಂಬರುವ ವರ್ಷದೊಳಗಾಗಿ ಸಂಪೂರ್ಣ ಯೋಜನೆ ಸಿದ್ದವಾಗುತ್ತದೆ ಎಂದು ತಿಳಿಸಿದ್ದಾರೆ.

ಪರಮಾಣು ಘಟಕಕ್ಕೆ ಇಂಧನ ಪೂರೈಸಲು ಫ್ರಾನ್ಸ್ , ಅಮೆರಿಕ ಮತ್ತು ಕೊರಿಯಾ ದೇಶಗಳ ಸರಬರಾಜುದಾರರೊಂದಿಗೆ ಮಾತುಕತೆ ನಡೆಸಲಾಗಿದ್ದು ಪಾಲುದಾರಿಕೆಗೆ ಕೂಡಾ ಅಹ್ವಾನವಿದೆ ಎಂದು ಹೇಳಿದ್ದಾರೆ.
ಮತ್ತಷ್ಟು
ಅತ್ಯಧಿಕ ಸಂಬಳ ಪಟ್ಟಿಯಲ್ಲಿ ನೂಯಿ
ಕೃಷಿ ಹೂಡಿಕೆ ಇಳಿಕೆಯಿಂದಾಗಿ ಅಹಾರ ಬಿಕ್ಕಟ್ಟು-ವಿಶ್ವಸಂಸ್ಥೆ
ಯುರೋಪ್‌ನಿಂದ ವಹಿವಾಟು ತಂತ್ರಜ್ಞಾನ ಕೇಂದ್ರ ಸ್ಥಾಪನೆ
ಭಾರತ-ಅಮೆರಿಕ ರಫ್ತು ವಹಿವಾಟಿನಲ್ಲಿ ದ್ವಿಗುಣ
ಇನ್ಫೋಸಿಸ್‌ ಬಂಡವಾಳ ಹೂಡಿಕೆಗೆ ಸಹಕಾರ: ಬುದ್ದ
ಪುಣೆ ಘಟಕದಿಂದ 1 ಸಾವಿರ 'ನ್ಯಾನೋ' ಮಾರುಕಟ್ಟೆಗೆ