ಪಶ್ಚಿಮ ಬಂಗಾಳದ ಕೈಗಾರಿಕೊದ್ಯಮ ಯೋಜನೆಗಳು ಸಿಂಗೂರ್ ವಿವಾದದ ಹಿನ್ನೆಲೆಯಲ್ಲಿ ತೊಳಲಾಟದಲ್ಲಿರುವಂತೆ, ಭಾರತದ ನಾಲ್ಕನೇ ಬೃಹತ್ ಸಾಫ್ಟವೇರ್ ರಫ್ತು ಸಂಸ್ಥೆಯಾದ ಸತ್ಯಂ ಕಂಪ್ಯೂಟರ್ ಸರ್ವಿಸಸ್ ಕೋಲ್ಕತಾದಿಂದ ನಿರ್ಗಮಿಸುವ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕೋಲ್ಕತಾದ ಸಾಲ್ಟ್ ಲೇಕ್‌ನಲ್ಲಿರುವ ಐಟಿ ಕೇಂದ್ರದಲ್ಲಿ ಸಾಫ್ಟವೇರ್ ಡೆವಲೆಪ್‌ಮೆಂಟ್ ಸೆಂಟರ್ ಸ್ಥಾಪಿಸುವ ಯೋಜನೆಯನ್ನು ಮುಂದುವರಿಯದಿರುವಂತೆ ಕಳೆದ ವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಪಶ್ಚಿಮ ಬಂಗಾಳದ ಸರಕಾರದೊಂದಿಗೆ ಇಲ್ಲಿಯವರೆಗೆ ಚರ್ಚಿಸಲಾಗಿಲ್ಲ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸತ್ಯಂ ಕಂಪೆನಿಯ ಅಂತರಿಕ ಮೂಲಗಳ ಪ್ರಕಾರ ಸಾಲ್ಟ್ ಲೇಕ್‌ನಲ್ಲಿ ಸರಕಾರ ನೀಡಿದ 2.77 ಏಕರೆ ಭೂಮಿ ತಗ್ಗಿನ ಪ್ರದೇಶದಲ್ಲಿರುವುದರಿಂದ ಮಳೆಗಾಲದಲ್ಲಿ ನೀರಿನಿಂದ ಆವೃತ್ತವಾಗುವುದರಿಂದ ಸಾಫ್ಟ್‌ವೇರ್ ಡೆವಲೆಪ್‌ಮೆಂಟ್ ಕೇಂದ್ರವನ್ನು ಸ್ಥಾಪಿಸಲು ಯೋಗ್ಯವಲ್ಲ ಎಂದು ತಿಳಿಸಿವೆ. ಆದರೆ ಪಶ್ಚಿಮ ಬಂಗಾಳದ ಸರಕಾರ ಸತ್ಯಂ ಬಂಗಾಳ ಬಿಟ್ಟು ತೆರಳುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಸಾಲ್ಟ್‌ಲೇಕ್‌ನಲ್ಲಿ ಸರಕಾರ ನೀಡಿದ ಸ್ಥಳ ಸತ್ಯಂಗೆ ಅನಾನುಕೂಲವಿದ್ದಲ್ಲಿ ರಾಜರ್‌ಹಾಟ್ ಬಳಿ ಇನ್ಫೋಸಿಸ್ ಹಾಗೂ ವಿಪ್ರೋ ಸಂಸ್ಥೆಗಳಿಗೆ 90 ಏಕರೆ ಭೂಮಿಯನ್ನು ನೀಡಿದ ಸ್ಥಳದ ಹತ್ತಿರದಲ್ಲಿರುವ ವೇದಿಕ್ ಗ್ರಾಮದ ಬಳಿ ಭೂಮಿಯನ್ನು ನೀಡಲಾಗುವುದು ಎಂದು ದೇಬೆಶ್ ದಾಸ್ ತಿಳಿಸಿದ್ದಾರೆ.
|