ಸೇವಾ ತೆರಿಗೆ , ಅಬಕಾರಿ ಹಾಗೂ ಕಸ್ಟಮ್ಸ್ ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಸರಕಾರದ ಆದಾಯ ಅಗಸ್ಟ್ ತಿಂಗಳಿಗೆ ಅಂತ್ಯಗೊಂಡಂತೆ 1,12,643 ಕೋಟಿಗೆ ತಲುಪಿದ್ದು, ಶೇ 35ರಷ್ಟು ಗುರಿಯನ್ನು ಸಾಧಿಸಿದಂತಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಸ್ಟಮ್ಸ್ ಹಾಗೂ ಅಬಕಾರಿ ತೆರಿಗೆ ಸಂಗ್ರಹದಲ್ಲಿ ಅಗಸ್ಟ್ ತಿಂಗಳಿಗೆ ಅಂತ್ಯಗೊಂಡಂತೆ ಶೇ10.5ರಷ್ಟು ಹೆಚ್ಚಳವಾಗಿ 93,856 ಕೋಟಿ ರೂಗಳಾಗಿದ್ದು, ಸೇವಾತೆರಿಗೆಯಲ್ಲಿ ಅಗಸ್ಟ್ ತಿಂಗಳಿಗೆ ಅಂತ್ಯಗೊಂಡಂತೆ ಶೇ 24.9ರಷ್ಟು ಹೆಚ್ಚಳವಾಗಿ 18.787 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಸ್ಟಮ್ಸ್ ತೆರಿಗೆ 1,18,930 ಕೋಟಿ ರೂ, ಅಬಕಾರಿಯಿಂದ 1,37,874 ಕೋಟಿ ರೂ ಮತ್ತು ಸೇವಾ ತೆರಿಗೆಯಿಂದ 64.460ಕೋಟಿ ರೂ.ಸೇರಿದಂತೆ 2008-09ರ ಬಜೆಟ್ ಪ್ರಕಾರ ಪರೋಕ್ಷ ತೆರಿಗೆ ಸಂಗ್ರಹ ಪ್ರಸ್ತುತ ಆರ್ಥಿಕ ವರ್ಷದ ಸಾಲಿನಲ್ಲಿ 3,21,264 ಕೋಟಿ ರೂ.ಗಳ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ
|