ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶೇಷ ಆರ್ಥಿಕ ವಲಯ: ಸಚಿವ ಕಮಲನಾಥ್ ಚರ್ಚೆ
ವಿಶೇಷ ಆರ್ಥಿಕವಲಯಗಳಿಗೆ ತೆರಿಗೆಯನ್ನು ರದ್ದುಪಡಿಸುವ ಕುರಿತಂತೆ ಉಂಟಾದ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ರಫ್ತು ಅಭಿವೃದ್ಧಿ ಸಮಿತಿ ವಾಣಿಜ್ಯ ಸಚಿವರೊಂದಿಗೆ ವಾರ್ಷಿಕ ಸಭೆಯಲ್ಲಿ ಚರ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಆರ್ಥಿಕ ವಲಯಗಳಿಂದ ಉದ್ಯೋಗ ಸೃಷ್ಟಿ, ರಫ್ತು ವಹಿವಾಟು ಹಾಗೂ ತೆರಿಗೆಮುಕ್ತತೆಯಿಂದ ಎದುರಾಗುವ ಸಮಸ್ಯೆಗಳು ಕುರಿತಂತೆ ಕೇಂದ್ರ ವಾಣಿಜ್ಯ ಸಚಿವ ಕಮಲ್‌ನಾಥ್ ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಾಯ ತೆರಿಗೆ ಹಾಗೂ ವಿಶೇಷ ಆರ್ಥಿಕ ವಲಯಗಳಿಗೆ ಉಕ್ಕು ಸರಬರಾಜಿನ ಮೇಲೆ ರಫ್ತು ತೆರಿಗೆ ಕಡಿತ ಸೇರಿದಂತೆ ಎದುರಾದ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂತೆ ಸಚಿವರಿಗೆ ಮನವಿ ಮಾಡಲಾಗುವುದು ಎಂದು ಪ್ರಧಾನ ನಿರ್ದೆಶಕ ಎಲ್‌.ಬಿ.ಸಿಂಘಾಲ್ ತಿಳಿಸಿದ್ದಾರೆ.

ದೇಶಿಯ ವಸ್ತುಗಳ ಉತ್ಪಾದನೆ ಮಾಡುತ್ತಿರುವ ವಿಶೇಷ ಆರ್ಥಿಕ ವಲಯಗಳಿಗೆ ಸರಬರಾಜು ಮಾಡುತ್ತಿರುವ ಕಂಪೆನಿಗಳ ವ್ಯಾಟ್ ತೆರಿಗೆಯನ್ನು ರದ್ದುಪಡಿಸುವ ಕುರಿತಂತೆ ಸಚಿವ ಕಮಲ್‌ನಾಥ್ ಅವರಿಗೆ ಮನವಿ ಮಾಡಲಾಗುವುದು ಎಂದು ಸಿಂಘಾಲ್ ತಿಳಿಸಿದ್ದಾರೆ.
ಮತ್ತಷ್ಟು
ಸಿಂಗೂರು ಕುರಿತು ಇನ್ನು ಮಾತುಕತೆ ಇಲ್ಲ: ಮಮತಾ
ಮಾರುಕಟ್ಟೆ ಕುಸಿತ: ಹುದ್ದೆಗಳ ಕಡಿತದತ್ತ ವಾಲ್ವೊ ಚಿತ್ತ
ಪಾಕ್ ಹಣದುಬ್ಬರ ಶೇ.25.33ಏರಿಕೆ
ಹಣಕಾಸು ಕ್ಷೇತ್ರದಿಂದ ಸಹಾರಾ ಹೊರಗೆ : ಆರ್‌ಬಿಐ
ಐಟಿ ಕ್ಷೇತ್ರಗಳಿಂದ 8 ಲಕ್ಷ ಹುದ್ದೆ ಸೃಷ್ಟಿ -ಸಿಎಂ
1,12,643 ಕೋಟಿ ದಾಖಲೆ ತೆರಿಗೆ ಸಂಗ್ರಹ : ಚಿದು