ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನಸಾಮಾನ್ಯರ ಅಹಾರಧಾನ್ಯ ದರಗಳಲ್ಲಿ ಇಳಿಕೆ: ಸರಕಾರ
ನಿರಂತರ ಮೂರು ವಾರಗಳಲ್ಲಿ ಹಣದುಬ್ಬರದಲ್ಲಿ ಶೇ.12ರಷ್ಟು ಏರಿಕೆಯಾಗಿದ್ದರೂ ಜನಸಾಮಾನ್ಯರ ಅಹಾರಧಾನ್ಯ ವಸ್ತುಗಳ ದರಗಳಲ್ಲಿ ಇಳಿಕೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಹಣದುಬ್ಬರ ಪ್ರಸಕ್ತ ವರ್ಷದಲ್ಲಿ ನಿಧಾನಗತಿಯ ಏರಿಕೆ ಕಂಡಿದ್ದರೂ ಅಗಸ್ಟ್ 30ಕ್ಕೆ ಅಂತ್ಯಗೊಂಡಂತೆ ಗ್ರಾಹಕರ ದಿನನಿತ್ಯದ ಅಗತ್ಯ ದಿನಸಿ ವಸ್ತುಗಳ ದರಗಳಲ್ಲಿ ಶೇ4.6ರಷ್ಟು ಇಳಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಾಮೀಣ ಭಾಗದಲ್ಲಿರುವ ಜನಸಾಮಾನ್ಯರ ಅಗತ್ಯ ಅಹಾರಧಾನ್ಯ ವಸ್ತುಗಳ ದರಗಳಲ್ಲಿ ಹಣದುಬ್ಬರ ಕಡಿಮೆ ಪ್ರಮಾಣದಲ್ಲಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ಸಂಸತ್ತಿನಲ್ಲಿ ವಿರೋಧ ಪಕ್ಷವಾದ ಬಿಜೆಪಿ, ಯುಪಿಎ ಸರಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ದರಗಳಲ್ಲಿ ಹೆಚ್ಚಳವಾಗುತ್ತಿದ್ದು, ಜನಮಾಸಾಮಾನ್ಯರಿಗೆ ಆರ್ಥಿಕತೆ ಹೊರೆಯಾಗಿದೆ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡ ಕೆಲ ದಿನಗಳ ನಂತರ ಹಣಕಾಸು ಸಚಿವಾಲಯದಿಂದ ಈ ಪ್ರಕಟಣೆ ಹೊರಬಿದ್ದಿದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಐಪಿಒ: ಅಭಿಪ್ರಾಯ ಸಂಗ್ರಹಣೆಯತ್ತ ಬಿಎಸ್‌ಎನ್ಎಲ್
ವಿಶೇಷ ಆರ್ಥಿಕ ವಲಯ: ಸಚಿವ ಕಮಲನಾಥ್ ಚರ್ಚೆ
ಸಿಂಗೂರು ಕುರಿತು ಇನ್ನು ಮಾತುಕತೆ ಇಲ್ಲ: ಮಮತಾ
ಮಾರುಕಟ್ಟೆ ಕುಸಿತ: ಹುದ್ದೆಗಳ ಕಡಿತದತ್ತ ವಾಲ್ವೊ ಚಿತ್ತ
ಪಾಕ್ ಹಣದುಬ್ಬರ ಶೇ.25.33ಏರಿಕೆ
ಹಣಕಾಸು ಕ್ಷೇತ್ರದಿಂದ ಸಹಾರಾ ಹೊರಗೆ : ಆರ್‌ಬಿಐ