ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾರು ಉತ್ಪಾದನೆಯತ್ತ ಹಿಂದೂಜಾ ಚಿತ್ತ
ಭಾರತೀಯ ಮೂಲದ ಇಂಗ್ಲೆಂಡ್ ಉದ್ಯಮಿ ಹಿಂದೂಜಾ, ಅಶೋಕ್ ಲೆಲ್ಯಾಂಡ್ ವಾಣಿಜ್ಯ ವಾಹನಗಳ ಉತ್ಪಾದನೆಯನ್ನು ವಿಸ್ತರಿಸುತ್ತಿದ್ದು, ಕಾರು ಉತ್ಪಾದನೆ ಸಾಧ್ಯತೆಗಳನ್ನು ತಳ್ಳಿಹಾಕಿಲ್ಲ ಎಂದು ಮೂಲಗಳು ತಿಳಿಸಿವೆ.

ಹಿಂದೂಜಾ ಸಂಸ್ಥೆಯ ಅಶೋಕ್ ಲೆಲ್ಯಾಂಡ್ ಭಾರತದಲ್ಲಿರುವ ಘಟಕಗಳ ಮೂಲಕ ವಾರ್ಷಿಕವಾಗಿ 85 ಸಾವಿರ ವಾಹನಗಳನ್ನು ಉತ್ಪಾದಿಸುತ್ತಿದ್ದು, ಇತ್ತಿಚೆಗೆ ಚೆನ್ನೈನಲ್ಲಿ ಸ್ಥಾಪಿಸಿರುವ ಘಟಕದಲ್ಲಿ 2600 ಕೋಟಿ ರೂ.ಗಳ ಹೂಡಿಕೆ ಮಾಡಲಾಗಿದ್ದುು, ಒಂದು ಲಕ್ಷ ವಾಹನಗಳ ಉತ್ಪಾದನೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಎನ್ನೊರ್ ಮತ್ತು ತಮಿಳುನಾಡಿನ ಹೊಸೂರ್ ಬಳಿಯಿರುವ ಘಟಕಗಳನ್ನು 1500 ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಸಿದ್ದತೆ ನಡೆಸಲಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಜಾ ಕಂಪೆನಿ, ಚೆನ್ನೈ, ಹೊಸೂರ್,ಭಾಂಧ್ರಾ(ನಾಗಪುರ್‌ ಬಳಿ)ರಾಜಸ್ಥಾನದಲ್ಲಿರುವ ಅಳ್ವಾರ್‌ಗಳಲ್ಲಿ ಘಟಕಗಳನ್ನು ಹೊಂದಿದ್ದು, ಪಂಥ್‌ನಗರದಲ್ಲಿ ಘಟಕವನ್ನು ನಿರ್ಮಿಸುತ್ತಿದ್ದು, ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ ಎಂದು ಹಿಂದೂಜಾ ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಜನಸಾಮಾನ್ಯರ ಅಹಾರಧಾನ್ಯ ದರಗಳಲ್ಲಿ ಇಳಿಕೆ: ಸರಕಾರ
ಐಪಿಒ: ಅಭಿಪ್ರಾಯ ಸಂಗ್ರಹಣೆಯತ್ತ ಬಿಎಸ್‌ಎನ್ಎಲ್
ವಿಶೇಷ ಆರ್ಥಿಕ ವಲಯ: ಸಚಿವ ಕಮಲನಾಥ್ ಚರ್ಚೆ
ಸಿಂಗೂರು ಕುರಿತು ಇನ್ನು ಮಾತುಕತೆ ಇಲ್ಲ: ಮಮತಾ
ಮಾರುಕಟ್ಟೆ ಕುಸಿತ: ಹುದ್ದೆಗಳ ಕಡಿತದತ್ತ ವಾಲ್ವೊ ಚಿತ್ತ
ಪಾಕ್ ಹಣದುಬ್ಬರ ಶೇ.25.33ಏರಿಕೆ