ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ರಿಟಿಷ್ ಟೆಲಿಕಾಂನಿಂದ ಟಿಸಿಎಸ್‌ಗೆ ಶೇರುಗಳ ಮಾರಾಟ?
ಮಹೀಂದ್ರಾ ಟೆಕ್ನಾಲಾಜಿಯಿಂದ ಹೊರಬರಲು ನಿರ್ಧರಿಸಿರುವ ಬ್ರಿಟಿಷ್ ಟೆಲಿಕಾಂ ಸಂಸ್ಥೆ ಶೇ31ರಷ್ಟು ಶೇರುಗಳನ್ನು ಟಾಟಾ ಕನ್ಸಲ್‌ಟನ್ಸಿಗೆ ಮಾರಾಟ ಮಾಡಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಬ್ರಿಟಿಷ್ ಟೆಲಿಕಾಂ ಸಹಭಾಗಿತ್ವದಿಂದ ಸಂಪೂರ್ಣ ಹೊರಬರಲು ನಿರ್ಧರಿಸಿದೆ ಎನ್ನುವ ಉಹಾಪೋಹಗಳಿದ್ದು, ಆದರೆ ಇಲ್ಲಿಯವರೆಗೆ ಬ್ರಿಟಿಷ್ ಟೆಲಿಕಾಂ ಅಥವಾ ಇಂಡಿಯನ್ ಕಾರ್ಪೋರೇಟ್ ಹೌಸ್‌ನಿಂದ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಬ್ರಿಟಿಷ್ ಟೆಲಿಕಾಂ ಶೇ 31ರಷ್ಟು ಶೇರುಗಳ ಮಾರಾಟ ಕುರಿತಂತೆ ಅಹ್ವಾನ ನೀಡಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಟಿಸಿಎಸ್ ವಕ್ತಾರ ಮಾರುಕಟ್ಟೆಯ ಬೆಳವಣಿಗೆಗಳ ಕುರಿತಂತೆ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಮಹೀಂದ್ರಾ ಆಂಡ್ ಮಹೀಂದ್ರಾ ಕಂಪೆನಿಯಲ್ಲಿ ಶೇ 44ರಷ್ಟು ಶೇರುಗಳನ್ನು ಹೊಂದಿರುವ ಬ್ರಿಟಿಷ್ ಟೆಲಿಕಾಂ ಹೆಚ್ಚಿನ ಶೇರುಗಳನ್ನು ಹೊಂದಿದ ಏಕೈಕ ಶೇರುದಾರರಾಗಿದ್ದು, ಬ್ರಿಟಿಷ್ ಟೆಲಿಕಾಂ ನಿರ್ಗಮನ ಕುರಿತಂತೆ ಯಾವುದೇ ಮಾಹಿತಿ ನೀಡಿಲ್ಲವೆಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಡಿಸೆಂಬರ್ ವೇಳೆಗೆ ಹಣದುಬ್ಬರ ಇಳಿಕೆ: ರಂಗರಾಜನ್
ಕಾರು ಉತ್ಪಾದನೆಯತ್ತ ಹಿಂದೂಜಾ ಚಿತ್ತ
ಜನಸಾಮಾನ್ಯರ ಅಹಾರಧಾನ್ಯ ದರಗಳಲ್ಲಿ ಇಳಿಕೆ: ಸರಕಾರ
ಐಪಿಒ: ಅಭಿಪ್ರಾಯ ಸಂಗ್ರಹಣೆಯತ್ತ ಬಿಎಸ್‌ಎನ್ಎಲ್
ವಿಶೇಷ ಆರ್ಥಿಕ ವಲಯ: ಸಚಿವ ಕಮಲನಾಥ್ ಚರ್ಚೆ
ಸಿಂಗೂರು ಕುರಿತು ಇನ್ನು ಮಾತುಕತೆ ಇಲ್ಲ: ಮಮತಾ