ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋಧಿ, ಭತ್ತ ಉತ್ಪನ್ನದಲ್ಲಿ ಬಿಹಾರ ದಾಖಲೆ
ಗೋಧಿ ಉತ್ಪಾದನೆಯಲ್ಲಿ ಬಿಹಾರ್ ರಾಜ್ಯ ದಾಖಲೆಯನ್ನು ಸ್ಥಾಪಿಸಿ ಗುರಿಯನ್ನು ತಲುಪಿದೆ ಎಂದು ಭಾರತೀಯ ಅಹಾರ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ

ಪ್ರಸಕ್ತ ಋತುವಿನಲ್ಲಿ ಬಿಹಾರ್ ರಾಜ್ಯ 4.99 ಲಕ್ಷ ಟನ್ ಗೋಧಿ ಹಾಗೂ 5.20 ಲಕ್ಷ ಟನ್ ಭತ್ತವನ್ನು ಬೆಳೆದು ದಾಖಲೆಯನ್ನು ಸೃಷ್ಟಿಸಿದೆ ಎಂದು ಭಾರತೀಯ ಅಹಾರ ನಿಗಮದ ಪ್ರಧಾನ ವ್ಯವಸ್ಥಾಪಕ ಅನುರಾಗ್ ಗುಪ್ತಾ ಸಂತಸ ವ್ಯಕ್ತಪಡಿಸಿದ್ದಾರೆ.

ಸರಕಾರ ಗೋಧಿ ಬೆಳೆಗೆ ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸಿದ್ದರಿಂದ ಗೋಧಿ ಉತ್ಪಾದನೆಯಲ್ಲಿ ಹೆಚ್ಚಳವಾಗಿರಬಹುದು ಎಂದು ಗುಪ್ತಾ ತಿಳಿಸಿದ್ದಾರೆ.

ಕಳೆದ ವರ್ಷ ಭತ್ತದ ಉತ್ಪಾದನೆ 2.63 ಲಕ್ಷ ಟನ್‌ಗಳಾಗಿದ್ದು, ಪ್ರಸಕ್ತ ಋತುವಿನಲ್ಲಿ 5.20 ಲಕ್ಷ ಟನ್ ದ್ವಿಗುಣ ಭತ್ತವನ್ನು ಬೆಳೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಕಾಲದಲ್ಲಿ ರಾಜ್ಯ ಸರಕಾರದ ಸಹಕಾರ ಹಾಗೂ ಮೇಲ್ವಿಚಾರಣೆ ಮತ್ತು ಸಂಗ್ರಹಣೆಗಾರಗಳ ಹೆಚ್ಚಳದಿಂದಾಗಿ ದಾಖಲೆಯ ಬೆಳೆಯನ್ನು ಬೆಳೆಯಲು ಸಾಧ್ಯವಾಗಿದೆ ಎಂದು ಪ್ರಧಾನ ವ್ಯವಸ್ಥಾಪಕ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ಬ್ರಿಟಿಷ್ ಟೆಲಿಕಾಂನಿಂದ ಟಿಸಿಎಸ್‌ಗೆ ಶೇರುಗಳ ಮಾರಾಟ?
ಡಿಸೆಂಬರ್ ವೇಳೆಗೆ ಹಣದುಬ್ಬರ ಇಳಿಕೆ: ರಂಗರಾಜನ್
ಕಾರು ಉತ್ಪಾದನೆಯತ್ತ ಹಿಂದೂಜಾ ಚಿತ್ತ
ಜನಸಾಮಾನ್ಯರ ಅಹಾರಧಾನ್ಯ ದರಗಳಲ್ಲಿ ಇಳಿಕೆ: ಸರಕಾರ
ಐಪಿಒ: ಅಭಿಪ್ರಾಯ ಸಂಗ್ರಹಣೆಯತ್ತ ಬಿಎಸ್‌ಎನ್ಎಲ್
ವಿಶೇಷ ಆರ್ಥಿಕ ವಲಯ: ಸಚಿವ ಕಮಲನಾಥ್ ಚರ್ಚೆ