ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೆಹಮಾನ್ ದಿವಾಳಿ: ನಷ್ಟದಲ್ಲಿ ಭಾರತೀಯ ಕಂಪೆನಿಗಳು
ಭಾರತದೊಂದಿಗೆ ಹೆಚ್ಚಿನ ವಹಿವಾಟು ಸಂಪರ್ಕವಿದ್ದ ಲೆಹಮಾನ್ ಹೋಲ್ಡಿಂಗ್ಸ್ ಇಂಕ್ ದಿವಾಳಿತನ ಹಾಗೂ ಮೆರಿಲ್ ಲಿಂಚ್ ಬ್ಯಾಂಕ್‌‌ನ್ನು ಬ್ಯಾಂಕ್ ಆಫ್ ಅಮೆರಿಕ ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ದೇಶದ ವಹಿವಾಟಿನ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ಮೂಲಗಳು ತಿಳಿಸಿವೆ

ಲೆಹಮಾನ್ ಬ್ರದರ್ಸ್ ಕಂಪೆನಿಯಲ್ಲಿ ಪ್ರಸ್ತುತ 2,500 ಉದ್ಯೋಗಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಹಾಗೂ ಮೆರಿಲ್ ಲಿಂಚ್ ಬ್ಯಾಂಕ್‌ನಲ್ಲಿ 600 ಭಾರತೀಯರು ಸೇವೆ ಸಲ್ಲಿಸುತ್ತಿದ್ದು, ಎಲ್ಲ ನೌಕರರು ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಕಂಪೆನಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜಾಗತಿಕ ಹೂಡಿಕೆಯ ಸಂಸ್ಥೆಯಾದ ಲೆಹಮಾನ್ ಬ್ರದರ್ಸ್ ದಿವಾಳಿಯಾಗಿದ್ದು, ಭಾರತೀಯ ಕಂಪೆನಿಗಳ ಶೇರುಗಳಲ್ಲಿ ಲೆಹಮಾನ್ ಕಂಪೆನಿ ಹೂಡಿಕೆ ಮಾಡಿದ 2ಸಾವಿರ ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳಿನಿಂದ ಲೆಹಮಾನ್ ಬ್ರದರ್ಸ್ ಕಂಪೆನಿ ಶೇರುಗಳನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸಿದ್ದರಿಂದ ಭಾರತದ ಕಂಪೆನಿಗಳ ನಷ್ಟದ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇಲ್ಲವಾದಲ್ಲಿ ನಷ್ಟದ ಮೌಲ್ಯ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಲೆಹಮಾನ್ ಬ್ರದರ್ಸ್ ನ್ಯೂಯಾರ್ಕ್‌ನ ದಕ್ಷಿಣಭಾಗದಲ್ಲಿರುವ ಜಿಲ್ಲೆಯಲ್ಲಿ ನ್ಯಾಯಾಲಯಕ್ಕೆ 11ನೇ ಕಲಂ ಅಡಿಯಲ್ಲಿ ಬ್ಯಾಂಕ್ ದಿವಾಳಿ ಕುರಿತಂತೆ ಅರ್ಜಿಯನ್ನು ಸಲ್ಲಿಸಿದ್ದು, ಆಸ್ತಿಗಳನ್ನು ರಕ್ಷಿಸುವಂತೆ ಮನವಿ ಮಾಡಲಾಗಿದೆ ಎಂದು ಅಡಳಿತ ಮಂಡಳಿಯ ನಿರ್ದೇಶಕರು ತಿಳಿಸಿದ್ದಾರೆ.
ಮತ್ತಷ್ಟು
ಗೋಧಿ, ಭತ್ತ ಉತ್ಪನ್ನದಲ್ಲಿ ಬಿಹಾರ ದಾಖಲೆ
ಬ್ರಿಟಿಷ್ ಟೆಲಿಕಾಂನಿಂದ ಟಿಸಿಎಸ್‌ಗೆ ಶೇರುಗಳ ಮಾರಾಟ?
ಡಿಸೆಂಬರ್ ವೇಳೆಗೆ ಹಣದುಬ್ಬರ ಇಳಿಕೆ: ರಂಗರಾಜನ್
ಕಾರು ಉತ್ಪಾದನೆಯತ್ತ ಹಿಂದೂಜಾ ಚಿತ್ತ
ಜನಸಾಮಾನ್ಯರ ಅಹಾರಧಾನ್ಯ ದರಗಳಲ್ಲಿ ಇಳಿಕೆ: ಸರಕಾರ
ಐಪಿಒ: ಅಭಿಪ್ರಾಯ ಸಂಗ್ರಹಣೆಯತ್ತ ಬಿಎಸ್‌ಎನ್ಎಲ್