ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರತಿಷ್ಠಿತ ಇನ್‌ಸ್ಯೂರೆನ್ಸ್ ಕಂಪೆನಿ ಎಐಜಿ ದಿವಾಳಿ
ಅಮೆರಿಕದ ಹಣಕಾಸು ಮಾರುಕಟ್ಟೆ ನಿರಂತರ ಕುಸಿತದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದ ಇನ್‌ಸ್ಯೂರೆನ್ಸ್ ಕಂಪೆನಿಯಾದ ಅಮೆರಿಕನ್ ಇಂಟರ್‌ನ್ಯಾಷನಲ್ ಗ್ರುಪ್ (ಎಐಜಿ) ದಿವಾಳಿಯಾಗಿದ್ದರಿಂದ ಮುಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಪ್ರಮುಖ ಬ್ಯಾಂಕ್‌ಗಳಾದ ಜೆಪಿ ಮೊರ್ಗಾನ್ ಚೇಸ್ ಹಾಗೂ ಗೋಲ್ಡಮ್ಯಾನ್ ಶಾಸ್ ಸಂಧಾನ ನಡೆಸುತ್ತಿದ್ದು, 75 ಬಿಲಿಯನ್ ಡಾಲರ್‌ ಪ್ಯಾಕೆಜ್‌ ನೀಡಿ ಇನ್‌ಸ್ಯೂರೆನ್ಸ್ ಕಂಪೆನಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಫೆಡರಲ್ ರಿಸರ್ವ್ ಅಧಿಕಾರಿಗಳು ತಿಳಿಸಿದ್ದಾರೆ.

ಬಿಕ್ಕಟ್ಟಿನಿಂದ ಹೊರಬರಲು ಇನ್‌ಸ್ಯೂರೆನ್ಸ್ ಕಂಪೆನಿಯಾದ ಅಮೆರಿಕನ್ ಇಂಟರ್‌ನ್ಯಾಷನಲ್ ಗ್ರುಪ್ 40 ಬಿಲಿಯನ್ ಡಾಲರ್‌ಗಳ ಬ್ರಿಡ್ಜ್ ಸಾಲ ನೀಡುವಂತೆ ರಿಸರ್ವ್ ಬ್ಯಾಂಕ್‌ಗೆ ಮನವಿ ಮಾಡಿತ್ತು.ಲೆಹಮಾನ್ ಬ್ರದರ್ಸ್ ದಿವಾಳಿ ಘೋಷಿಸಿದ್ದರಿಂದ ಸಾಲವನ್ನು ಮರುಪಾವತಿಸುವ ಸಾಧ್ಯತೆಗಳಿಲ್ಲವೆಂದು ಸಾಲ ನೀಡಲು ತಿರಸ್ಕರಿಸಿದೆ.

ಸ್ಟ್ಯಾಂಡರ್ಡ್ ಮತ್ತು ಪೂರ್ಸ್ ಮೂಡಿ ಮತ್ತು ಫಿಚ್ ಬೃಹತ್ ಸಾಲ ನೀಡುವ ಸಂಸ್ಥೆಗಳು ಇನ್‌ಸ್ಯೂರೆನ್ಸ್ ಕಂಪೆನಿಯಾದ ಅಮೆರಿಕನ್ ಇಂಟರ್‌ನ್ಯಾಷನಲ್ ಗ್ರುಪ್‌ಗೆ ಸಾಲ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇನ್‌ಸ್ಯೂರೆನ್ಸ್ ಕಂಪೆನಿ ದಿವಾಳಿ ಅಂಚಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಲೆಹಮಾನ್ ದಿವಾಳಿ: ನಷ್ಟದಲ್ಲಿ ಭಾರತೀಯ ಕಂಪೆನಿಗಳು
ಗೋಧಿ, ಭತ್ತ ಉತ್ಪನ್ನದಲ್ಲಿ ಬಿಹಾರ ದಾಖಲೆ
ಬ್ರಿಟಿಷ್ ಟೆಲಿಕಾಂನಿಂದ ಟಿಸಿಎಸ್‌ಗೆ ಶೇರುಗಳ ಮಾರಾಟ?
ಡಿಸೆಂಬರ್ ವೇಳೆಗೆ ಹಣದುಬ್ಬರ ಇಳಿಕೆ: ರಂಗರಾಜನ್
ಕಾರು ಉತ್ಪಾದನೆಯತ್ತ ಹಿಂದೂಜಾ ಚಿತ್ತ
ಜನಸಾಮಾನ್ಯರ ಅಹಾರಧಾನ್ಯ ದರಗಳಲ್ಲಿ ಇಳಿಕೆ: ಸರಕಾರ