ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್‌ಟೆಲ್ ಟಾಪ್-ಅಪ್ ಕಾರ್ಡಗಳ ಸೇವಾ ಶುಲ್ಕ ಕಡಿತ
ಟ್ರಾಯ್ ಮಾರ್ಗದರ್ಶಿ ಸೂತ್ರಗಳ ಅನ್ವಯ ದೇಶದ ಪ್ರಮುಖ ಖಾಸಗಿ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್‌ಟೆಲ್ ಸೋಮವಾರದಂದು ತನ್ನ ಎಲ್ಲ ಟಾಪ್-ಅಪ್ ಕಾರ್ಡಗಳ ಸೇವಾ ಶುಲ್ಕದಲ್ಲಿ ಕಡಿತ ಮಾಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಎಲ್ಲ ಟಾಪ್‌-ಅಪ್ ಕಾರ್ಡ್‌ ಹಾಗೂ ರಿಚಾರ್ಜ್‌ಗಳ ಮೇಲೆ ಎರಡು ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ ಎಂದು ಭಾರ್ತಿ ಏರ್‌ಟೆಲ್ ಮಾಧ್ಯಮಗಳಿಗೆ ನೀಡಿದ ಜಾಹೀರಾತಿನಲ್ಲಿ ಪ್ರಕಟಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಇತ್ತಿಚೆಗೆ ಟೆಲಿಕಾಂ ರೆಗುಲೆಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಖಾಸಗಿ ಟೆಲಿಕಾಂ ಅಪರೇಟರ್‌ಗಳಿಗೆ ಟಾಪ್-ಅಪ್ ರಿಚಾರ್ಜ್ ಕೂಪನ್‌‌ಗಳಿಗೆ ದಾಖಲಾತಿ ಶುಲ್ಕಯ ನೆಪದಲ್ಲಿ 2 ರೂಪಾಯಿಗಳಿಗಿಂತ ಹೆಚ್ಚಿನ ದರವನ್ನು ನಿಗದಿಪಡಿಸಬಾರದೆಂದು ಆದೇಶ ನೀಡಿತ್ತು.

ಸಪ್ಟೆಂಬರ್ 15 ರೊಳಗಾಗಿ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವಂತೆ ಟ್ರಾಯ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಸೋಮವಾರದಿಂದ ಭಾರ್ತಿ ಏರ್‌ಟೆಲ್ ಎರಡು ರೂಪಾಯಿ ನಿಗದಿಪಡಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಮತ್ತಷ್ಟು
ಪ್ರತಿಷ್ಠಿತ ಇನ್‌ಸ್ಯೂರೆನ್ಸ್ ಕಂಪೆನಿ ಎಐಜಿ ದಿವಾಳಿ
ಲೆಹಮಾನ್ ದಿವಾಳಿ: ನಷ್ಟದಲ್ಲಿ ಭಾರತೀಯ ಕಂಪೆನಿಗಳು
ಗೋಧಿ, ಭತ್ತ ಉತ್ಪನ್ನದಲ್ಲಿ ಬಿಹಾರ ದಾಖಲೆ
ಬ್ರಿಟಿಷ್ ಟೆಲಿಕಾಂನಿಂದ ಟಿಸಿಎಸ್‌ಗೆ ಶೇರುಗಳ ಮಾರಾಟ?
ಡಿಸೆಂಬರ್ ವೇಳೆಗೆ ಹಣದುಬ್ಬರ ಇಳಿಕೆ: ರಂಗರಾಜನ್
ಕಾರು ಉತ್ಪಾದನೆಯತ್ತ ಹಿಂದೂಜಾ ಚಿತ್ತ