ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಪಲ್‌ನಿಂದ ಐಪೋಡ್ ಟಚ್ ಬಿಡುಗಡೆ
ಭಾರತೀಯ ಗ್ರಾಹಕರಿಗೆ ಮುಂಬರುವ ಅಕ್ಟೋಬರ್ ತಿಂಗಳಿನಿಂದ ಆಪಲ್ ಇಂಕ್ ಸಂಸ್ಥೆಯ ಐಪೋಡ್ ಟಚ್ ಲಭ್ಯವಾಗಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಅಕ್ಟೋಬರ್ 8 ರಿಂದ 8 ಜಿಬಿ ಮಾಡೆಲ್‌ನ ಐ ಪೋಡ್ ಟಚ್ ಕೇವಲ 15,100 ರೂಪಾಯಿಗಳಿಗೆ ಭಾರತೀಯ ಗ್ರಾಹಕರಿಗೆ ಲಭ್ಯವಾಗಲಿದೆ.16 ಜಿಬಿ ಮಾಡೆಲ್ ಐ ಪೋಡ್ ಬೆಲೆ 19,100 ಮತ್ತು 32 ಜಿಬಿ ಮಾಡೆಲ್ ಐಪೋಡ್ ಬೆಲೆ 25 ಸಾವಿರ ರೂಪಾಯಿಗಳಿಗೆ ದೊರೆಯಲಿದೆ ಎಂದು ಆಪಲ್‌ನ ಅಧಿಕೃತ ಮಾರಾಟಗಾರರಾದ ಅಪಲ್ ಏಷ್ಯಾ ಫೆಸಿಫಿಕ್ ಹಿರಯ ವ್ಯವಸ್ಥಾಪಕರಾದ ಇ.ವೈ.ವೊ ಹೇಳಿದ್ದಾರೆ.

ಐಪೋಡ್ ಟಚ್ ಗ್ರಾಹಕರು ಮಿಲಿಯನ್‌ಗಟ್ಟಲೆ ಹಾಡುಗಳನ್ನು ಕೇಳಬಹುದಾಗಿದ್ದು, ಸಾವಿರಾರು ಹಾಲಿವುಡ್ ಚಲನಚಿತ್ರಗಳನ್ನು ನೋಡಬಹುದಾಗಿದೆ.ಅಪಲ್ ಸ್ಟೋರ್‌ನಲ್ಲಿ ನೂರಾರು ಪಂದ್ಯಗಳನ್ನು ಡೌನ್‌ಲೋಡ್ ಮಾಡಿಕೊಂಡು ಆಡಬಹುದಾಗಿದೆ ಎಂದು ವೊ ತಿಳಿಸಿದ್ದಾರೆ.

32 ಜಿಬಿ ಮಾಡೆಲ್‌ನಲ್ಲಿ 7 ಸಾವಿರ ಹಾಡುಗಳು ಹಾಗೂ 16 ಜಿಬಿಯಲ್ಲಿ 3500 ಹಾಡುಗಳು ಮತ್ತು 8 ಜಿಬಿಯಲ್ಲಿ 1,750ಹಾಡುಗಳನ್ನು ಕೇಳಿ ಆನಂದಿಸಬಹುದಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಐಪೋಡ್ ಟಚ್ ಗ್ರಾಹಕರು ಅತ್ಯಾಧುನಿಕ ಐ ಟ್ಯೂನ್‌ಗಳನ್ನು ಕೇಳಬಹುದಾಗಿದ್ದು ಕಣ್ಮನ ಸೆಳೆಯುವ ಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಮುಂದಿನ ಪೀಳಿಗೆಯ ಗ್ರಾಹಕರಿಗಾಗಿ ಐಪೋಡ್ ನ್ಯಾನೋ ಕೇವಲ 9,700 ರೂಪಾಯಿಗಳಲ್ಲಿ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಏರ್‌ಟೆಲ್ ಟಾಪ್-ಅಪ್ ಕಾರ್ಡಗಳ ಸೇವಾ ಶುಲ್ಕ ಕಡಿತ
ಪ್ರತಿಷ್ಠಿತ ಇನ್‌ಸ್ಯೂರೆನ್ಸ್ ಕಂಪೆನಿ ಎಐಜಿ ದಿವಾಳಿ
ಲೆಹಮಾನ್ ದಿವಾಳಿ: ನಷ್ಟದಲ್ಲಿ ಭಾರತೀಯ ಕಂಪೆನಿಗಳು
ಗೋಧಿ, ಭತ್ತ ಉತ್ಪನ್ನದಲ್ಲಿ ಬಿಹಾರ ದಾಖಲೆ
ಬ್ರಿಟಿಷ್ ಟೆಲಿಕಾಂನಿಂದ ಟಿಸಿಎಸ್‌ಗೆ ಶೇರುಗಳ ಮಾರಾಟ?
ಡಿಸೆಂಬರ್ ವೇಳೆಗೆ ಹಣದುಬ್ಬರ ಇಳಿಕೆ: ರಂಗರಾಜನ್