ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಚ್ಚಾ ತೈಲ ದರದಲ್ಲಿ ಇಳಿಕೆ
ಲೆಹಮಾನ್ ಬ್ರದರ್ಸ್ ದಿವಾಳಿಯ ನಂತರ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಇಂಧನ ಬೇಡಿಕೆಯ ಕುಸಿತದ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 93 ಡಾಲರ್‌ ತಲುಪಿದೆ ಎಂದು ತಜ್ಞರು ಆಭಿಪ್ರಾಯಪಟ್ಟಿದ್ದಾರೆ.

ಲಂಡನ್‌ನ ಬ್ರೆಂಟ್ ನಾರ್ಥ್‌ನಲ್ಲಿ ಅಕ್ಟೋಬರ್ ತಿಂಗಳ ಕಚ್ಚಾ ತೈಲ ವಿತರಣೆ ದರಗಳಲ್ಲಿ 4.81 ಡಾಲರ್‌ಗಳ ಇಳಿಕೆಯಾಗಿದ್ದು ಪ್ರತಿ ಬ್ಯಾರೆಲ್‌ಗೆ 92.77ಡಾಲರ್‌ಗೆ ತಲುಪಿದ್ದು,ಕಳೆದ ವರ್ಷದ ಫೆಬ್ರವರಿ ತಿಂಗಳ ನಂತರ ಅತ್ಯಂತ ಕಡಿಮೆ ದರಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೇಡಿಕೆಯಲ್ಲಿ ಕೊರತೆಯಾಗಿದೆ ಎಂದು ಲಂಡನ್‌ನ ತಜ್ಞರಾದ ಮಿಖೈಲ್ ಡೇವಿಸ್ ಹೇಳಿದ್ದಾರೆ.

ಚಂಡುಮಾರುತದಿಂದಾಗಿ ಅಮೆರಿಕದ ತೈಲ ಉತ್ಪಾದನಾ ಕೇಂದ್ರಗಳ ಮೇಲೆ ಹಾನಿಯಾಗಿ ಉತ್ಪಾದನೆ ಕುಂಠಿತವಾಗಬಹುದು ಎನ್ನುವ ಆತಂಕವು ಕೂಡಾ ಕಚ್ಚಾ ತೈಲ ದರ ಇಳಿಕೆಗೆ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಮತ್ತಷ್ಟು
ಆಪಲ್‌ನಿಂದ ಐಪೋಡ್ ಟಚ್ ಬಿಡುಗಡೆ
ಏರ್‌ಟೆಲ್ ಟಾಪ್-ಅಪ್ ಕಾರ್ಡಗಳ ಸೇವಾ ಶುಲ್ಕ ಕಡಿತ
ಪ್ರತಿಷ್ಠಿತ ಇನ್‌ಸ್ಯೂರೆನ್ಸ್ ಕಂಪೆನಿ ಎಐಜಿ ದಿವಾಳಿ
ಲೆಹಮಾನ್ ದಿವಾಳಿ: ನಷ್ಟದಲ್ಲಿ ಭಾರತೀಯ ಕಂಪೆನಿಗಳು
ಗೋಧಿ, ಭತ್ತ ಉತ್ಪನ್ನದಲ್ಲಿ ಬಿಹಾರ ದಾಖಲೆ
ಬ್ರಿಟಿಷ್ ಟೆಲಿಕಾಂನಿಂದ ಟಿಸಿಎಸ್‌ಗೆ ಶೇರುಗಳ ಮಾರಾಟ?