ಅತ್ಯಾಧುನಿಕ ತಂತ್ರಜ್ಞಾನ ವರ್ಗಾವಣೆಗಾಗಿ ರಕ್ಷಣಾ ಕ್ಷೇತ್ರದಲ್ಲಿ ಶೇ.49 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಸರಕಾರ ಹೆಚ್ಚಳಗೊಳಿಸುವುದು ಅಗತ್ಯವಾಗಿದೆ ಎಂದು ಕೈಗಾರಿಕೋದ್ಯಮದ ಒಕ್ಕೂಟ ಅಸೋಚಾಮ್ ಸರಕಾರವನ್ನು ಕೋರಿದೆ.
ರಕ್ಷಣಾ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಶೇ. 26ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಪರವಾನಿಗಿಯಿದ್ದು, ಅದನ್ನು ಷೇ 49 ಕ್ಕೇರಿಸಿ ಅತ್ಯಧುನಿಕ ತಂತ್ರಜ್ಞಾನದ ಉಪಕರಣಗಳನ್ನು ವರ್ಗಾವಣೆ ಮಾಡಲು ಅನುವಾಗುತ್ತದೆ ಎಂದು ವಿವರಣೆ ನೀಡಿದೆ.
1999ರ ಕಾರ್ಗಿಲ್ ಯುದ್ದದ ನಂತರ ಭಾರತದ ಶಸ್ತ್ರಾಸ್ತ್ರ ಅಮುದು 25 ಬಿಲಿಯನ್ ಡಾಲರ್‌ಗಳಾಗಿದ್ದು, ಮುಂಬರುವ 2012ರ ವೇಳೆಗೆ 30 ಬಿಲಿಯನ್ ಗಡಿ ದಾಟಲಿದೆಯಾದ್ದರಿಂದ ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ
ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳ ಮಾಡುವುದು ಸೂಕ್ತ ಎಂದು ಅಸೋಚಾಮ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಅಭಿಪ್ರಾಯಪಚ್ಚಿದ್ದಾರೆ.
ಭಾರತ, ಶಸ್ತ್ರಾಸ್ತ್ರಗಳನ್ನು ಅಮುದು ಮಾಡಿಕೊಳ್ಳುವ ಜಗತ್ತಿನ ಪ್ರಮುಖ ರಾಷ್ಟ್ರವಾಗಿದ್ದು, ಮಿಲಿಟರಿ ಹಾರ್ಡವೇರ್‌ಗಳಿಗಾಗಿ 6 ಬಿಲಿಯನ್ ಡಾಲರ್ ಅಮುದು ಮಾಡಿಕೊಳ್ಳುತ್ತಿದೆ ಎಂದು ಹೇಳಿದೆ.
|