ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಲಯನ್ಸ್‌ನಿಂದ ಪ್ರೀಪೇಡ್ ಬ್ಲ್ಯಾಕ್ ಬೆರ್ರಿ ಸೇವೆ ಆರಂಭ
ರಿಲಯನ್ಸ್ ಕಮ್ಯೂನಿಕೇಶನ್ಸ್ ದೇಶದಲ್ಲಿ ಪ್ರಪ್ರಥಮ ಬಾರಿಗೆ ಜಿಎಸ್‌ಎಂ ಹಾಗೂ ಸಿಡಿಎಂಎ ಎರಡು ಮಾಡೆಲ್‌ಗಳ ಮೇಲೆ ಪ್ರೀ ಪೇಡ್ ಬ್ಲ್ಯಾಕ್ ಬೆರ್ರಿ ಸೇವೆಯನ್ನು ಆರಂಭಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ದೇಶದಲ್ಲಿ 200 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಬ್ಲ್ಯಾಕ್ ಬೆರ್ರಿ ಸ್ಮಾರ್ಟ್‌ಫೋನ್ ಗ್ರಾಹಕರನ್ನು ವಿಸ್ತರಿಸಲು ಯೋಜನೆಯನ್ನು ಆರಂಭಿಸಿದೆ ಎಂದು ರಿಲಯನ್ಸ್ ಕಮ್ಯೂನಿಕೇಶನ್ಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಇಲ್ಲಿಯವರೆಗೆ ಬ್ಲ್ಯಾಕ್ ಬೆರ್ರಿ ಯೋಜನೆ ಕೇವಲ ವೋಡಾಫೇನ್ ಎಸ್ಸಾರ್ ಮತ್ತು ಭಾರ್ತಿ ಏರ್‌ಟೆಲ್ ಪೋಸ್ಟ್‌ಪೇಡ್ ಸಂಪರ್ಕಗಳಿಗೆ ಮಾತ್ರ ಅವಕಾಶವನ್ನು ನೀಡಲಾಗಿತ್ತು.

ರಿಲಯನ್ಸ್ ಕಂಪೆನಿ ಎರಡು ದರಗಳ ಯೋಜನೆಯನ್ನು ಪರಿಚಯಿಸಿದ್ದು, ಪ್ಲ್ಯಾನ್ 1,299 ಹಾಗೂ ಪ್ಲ್ಯಾನ್ 1,599ಗಳಲ್ಲಿ ರಿಲಯನ್ಸ್‌ನಿಂದ ರಿಲಯನ್ಸ್‌ಗೆ ಸ್ಥಳೀಯ ಹಾಗೂ ರಾಜ್ಯದೊಳಗಿರುವ ಪ್ರದೇಶಗಳಿಗೆ ಕರೆಗಳು ಉಚಿತವಾಗಿವೆ.ಪ್ಲ್ಯಾನ್ 1,299 ನಲ್ಲಿ ರಿಲಯನ್ಸ್‌ನಿಂದ ಇತರ ಮೊಬೈಲ್‌ಗಳಿಗೆ ಸ್ಥಳೀಯ ಹಾಗೂ ಎಸ್‌ಟಿಡಿ ದರಗಳನ್ನು 49 ಪೈಸೆಯಿಂದ 99ಪೈಸೆಗೆ ನಿಗದಿಪಡಿಸಲಾಗಿದೆ.ಅಂತಾರಾಷ್ಟ್ರೀಯ ಕರೆಗಳನ್ನು 6.90 ರೂ.ಗಳಿಂದ 40 ರೂ. ಗಳವರೆಗೆ ನಿಗದಿಪಡಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಮತ್ತಷ್ಟು
ರಕ್ಷಣಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಳವಾಗಲಿ
ಉಕ್ಕಿನ ಘಟಕ ಸ್ಥಾಪನೆಗೆ ಸಿದ್ದತೆ : ರಿಲಯನ್ಸ್
ಕಚ್ಚಾ ತೈಲ ದರದಲ್ಲಿ ಇಳಿಕೆ
ಆಪಲ್‌ನಿಂದ ಐಪೋಡ್ ಟಚ್ ಬಿಡುಗಡೆ
ಏರ್‌ಟೆಲ್ ಟಾಪ್-ಅಪ್ ಕಾರ್ಡಗಳ ಸೇವಾ ಶುಲ್ಕ ಕಡಿತ
ಪ್ರತಿಷ್ಠಿತ ಇನ್‌ಸ್ಯೂರೆನ್ಸ್ ಕಂಪೆನಿ ಎಐಜಿ ದಿವಾಳಿ