ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೆಹ್ಮಾನ್ ಸಿಬ್ಬಂದಿ ಉದ್ಯೋಗದ ಪರದಾಟದಲ್ಲಿ
ಸೋಮವಾರದವರೆಗೆ ಅಮೆರಿಕದ ನಾಲ್ಕನೇ ಪ್ರಮುಖ ಬ್ಯಾಂಕಾಗಿದ್ದ ಲೆಹ್ಮಾನ್ ಬ್ರದರ್ಸ್ ಸಂಸ್ಥೆಯಲ್ಲಿ ಹೆಚ್ಚಿನ ಸಂಬಳ ಪಡೆದು ಉನ್ನತ ಮಟ್ಟದ ಹುದ್ದೆಯನ್ನು ಅಲಂಕರಿಸಿ ಕಳೆದ ವಾರಂತ್ಯದವರೆಗೆ ರಿಶಿ ಮಲ್ಹೋತ್ರಾ (ಹೆಸರು ಬದಲಾಯಿಸಲಾಗಿದೆ) ನೆರಮನೆಯವರ ಶತ್ರವಾಗಿದ್ದರು.

ಸೋಮವಾರದಂದು ಲೆಹ್ಮಾನ್ ಕಂಪೆನಿ ದಿವಾಳಿಯಾಗಿದೆಯೆಂದು ನ್ಯಾಯಾಲಯಕ್ಕೆ ಆರ್ಜಿ ಸಲ್ಲಿಸಿದ್ದರಿಂದ ಮಲ್ಹೋತ್ರಾ ತನ್ನ ಉದ್ಯೋಗವನ್ನು ಕಳೆದುಕೊಳ್ಳಬೇಕಾಯಿತು. ಭಾರತೀಯ ಹೂಡಿಕೆ ಬ್ಯಾಂಕ್‌ಗಳಿಗೆ ಹುದ್ದೆಗಳನ್ನು ತುಂಬುವಂತೆ ಉದ್ಯೋಗಿಗಳು ಕರೆ ನೀಡುತ್ತಿದ್ದು, ಸಂಬಳ ಕಡಿತವಾದರೂ ಪರವಾಗಿಲ್ಲ ಕರ್ತವ್ಯ ನಿರ್ವಹಿಸಲು ಸಿದ್ದ ಎಂದು ಹೇಳುತ್ತಿದ್ದಾರೆ.

ಈ ಗತಿ ಬಂದಿರುವುದು ಕೇವಲ ಮಲ್ಹೋತ್ರಾ ಅವರಿಗಲ್ಲ. ವಿದೇಶಗಳಲ್ಲಿ ,ಭಾರತದಲ್ಲಿರುವ ಲೆಹ್ಮಾನ್ ಬ್ರದರ್ಸ್ ಉದ್ಯೋಗಿಗಳ ಬವಣೆ ಮೇರೆ ಮೀರಿದೆ. ತಮ್ಮ ವಿವರಣೆಗಳನ್ನು ಹಿಡಿದುಕೊಂಡು ಕಂಪೆನಿಯಿಂದ ಕಂಪೆನಿಗೆ ಉದ್ಯೋಗ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಉದ್ಯೋಗಕ್ಕಾಗಿ ಅಂತರ್ಜಾಲವನ್ನು ಜಾಲಾಡುತ್ತಿದ್ದಾರೆ.

ಮುಂಬೈನ ಅತಿ ದುಬಾರಿ ಪೊವಾಯಿ ಪ್ರದೇಶದಲ್ಲಿರುವ ಹಿರನಂದಾನಿ ಗಾರ್ಡನ್‌ನಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಲೆಹ್ಮಾನ್ ಉದ್ಯೋಗಿಗಳನ್ನು ಮುಖ್ಯ ಕಚೇರಿಯಿಂದ ನಿರ್ಧಾರ ಬರುವವರೆಗೆ 72 ಗಂಟೆಗಳ ಕಾಲ ನಿರೀಕ್ಷಿಸುವಂತೆ ಕೋರಲಾಗಿದೆ. ಆದರೆ ಉದ್ಯೋಗಿಗಳು ಉದ್ಯೋಗದ ಅವಕಾಶಗಳಿಗಾಗಿ ಬೇರೆಡೆ ಸಂಪರ್ಕಿಸುತ್ತಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಲೆಹ್ಮಾನ್ ಬ್ಯಾಂಕ್‌ಗೆ ಉದ್ಯೋಗಿಯಾಗಿ ಸೇರಿಕೊಂಡ ವ್ಯಕ್ತಿಯೊಬ್ಬರು. ಅಡಳಿತ ಮಂಡಳಿ ಸಮಯವಕಾಶ ಕೋರಿದೆ. ಆದರೆ ನಾನು ನನ್ನ ಸ್ವವಿವರಗಳನ್ನು ಆನ್‌ಲೈನ್ ಸೇರಿಸುವ ಮೂಲಕ ಉದ್ಯೋಗಗಳನ್ನು ಹುಡುಕುತ್ತಿದ್ದೆನೆ. ಶೀಘ್ರದಲ್ಲಿ ಉದ್ಯೋಗ ದೊರೆಯುವ ನಿರೀಕ್ಷೆಯಿದೆ. ಹಡಗು ಮುಳುಗುವವರೆಗೆ ಕಾಯುವುದಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು
ರಿಲಯನ್ಸ್‌ನಿಂದ ಪ್ರೀಪೇಡ್ ಬ್ಲ್ಯಾಕ್ ಬೆರ್ರಿ ಸೇವೆ ಆರಂಭ
ರಕ್ಷಣಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಳವಾಗಲಿ
ಉಕ್ಕಿನ ಘಟಕ ಸ್ಥಾಪನೆಗೆ ಸಿದ್ದತೆ : ರಿಲಯನ್ಸ್
ಕಚ್ಚಾ ತೈಲ ದರದಲ್ಲಿ ಇಳಿಕೆ
ಆಪಲ್‌ನಿಂದ ಐಪೋಡ್ ಟಚ್ ಬಿಡುಗಡೆ
ಏರ್‌ಟೆಲ್ ಟಾಪ್-ಅಪ್ ಕಾರ್ಡಗಳ ಸೇವಾ ಶುಲ್ಕ ಕಡಿತ