ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ದರಗಳಲ್ಲಿ ಇಳಿಕೆಯಿಲ್ಲ: ದಿಯೋರಾ
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲಗಳ ದರಗಳಲ್ಲಿ ಇಳಿಕೆಯಾದರೂ ಡಾಲರ ಎದುರಿಗೆ ರೂಪಾಯಿ ಮೌಲ್ಯದ ಕುಸಿತದ ಹಿನ್ನೆಲೆಯಲ್ಲಿ ಚಿಲ್ಲರೆ ಪೆಟ್ರೋಲ್ ವಹಿವಾಟಿನಲ್ಲಿ ದರ ಇಳಿಕೆಯಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೀಯೋರಾ ತಿಳಿಸಿದ್ದಾರೆ.

ತೈಲ ದರ ಇಳಿಸುವುದನ್ನು ಪ್ರತಿಯೊಬ್ಬರು ಸ್ವಾಗತಿಸುತ್ತಾರೆ.ಆದರೆ ಸಾರ್ವಜನಿಕ ಕ್ಷೇತ್ರದಲ್ಲಿರುವ ತೈಲ ಕಂಪೆನಿಗಳು ಇನ್ನು ನಷ್ಟದಲ್ಲಿರುವುದರಿಂದ ಸದ್ಯಕ್ಕೆ ಯಾವುದೇ ಕಡಿತವಿಲ್ಲ.ಮುಂದಿನ ದಿನಗಳಲ್ಲಿ ರೂಪಾಯಿ ಮೌಲ್ಯ ವೃದ್ಧಿಯಾದ ನಂತರ ದರ ಕಡಿತವನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.

ಭಾರತ ಖರೀದಿಸುತ್ತಿರುವ ಕಚ್ಚಾ ತೈಲದ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಅತಿ ಕಡಿಮೆಯಾಗಿ ಪ್ರತಿ ಬ್ಯಾರೆಲ್‌ಗೆ 91.69 ಡಾಲರ್‌ಗೆ ತಲುಪಿದೆ. ಆದರೆ ಡಾಲರ್ ಎದುರಿಗೆ ರೂಪಾಯಿ ಮೌಲ್ಯದ ದರ ಕುಸಿತದ ಹಿನ್ನೆಲೆಯಲ್ಲಿ ರಿಟೇಲ್ ದರ ಕಡಿತವಾಗುವುದು ಅಸಾಧ್ಯವಾಗಿದೆ.

ಪ್ರಸಕ್ತ ತಿಂಗಳಿನಲ್ಲಿ ರೂಪಾಯಿ ಮೌಲ್ಯ ಶೇ 15ರಷ್ಟು ಕುಸಿತ ಕಂಡ ಹಿನ್ನೆಲೆಯಲ್ಲಿ ತೈಲ ಕಂಪೆನಿಗಳು ಹೆಚ್ಚಿನ ದರವನ್ನು ಪಾವತಿಸಬೇಕಾಗಿರುವುದರಿಂದ ದರ ಇಳಿಕೆ ಸಾಧ್ಯವಾಗಿಲ್ಲ ಎಂದು ಸಚಿವ ದೀಯೋರಾ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ಲೆಹ್ಮಾನ್ ಸಿಬ್ಬಂದಿ ಉದ್ಯೋಗದ ಪರದಾಟದಲ್ಲಿ
ರಿಲಯನ್ಸ್‌ನಿಂದ ಪ್ರೀಪೇಡ್ ಬ್ಲ್ಯಾಕ್ ಬೆರ್ರಿ ಸೇವೆ ಆರಂಭ
ರಕ್ಷಣಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಳವಾಗಲಿ
ಉಕ್ಕಿನ ಘಟಕ ಸ್ಥಾಪನೆಗೆ ಸಿದ್ದತೆ : ರಿಲಯನ್ಸ್
ಕಚ್ಚಾ ತೈಲ ದರದಲ್ಲಿ ಇಳಿಕೆ
ಆಪಲ್‌ನಿಂದ ಐಪೋಡ್ ಟಚ್ ಬಿಡುಗಡೆ