ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾನ್‌ಬಕ್ಸಿ ಔಷಧಿ ಅಮದಿಗೆ ಅಮೆರಿಕ ತಡೆ
ಕೊಲೆಸ್ಟ್ರೋಲ್ ಹಾಗೂ ಆಂಟಿ ಬಯಾಟಿಕ್ಸ್ ಔಷಧಿಗಳು ಸೇರಿದಂತೆ ಅಮೆರಿಕ 30 ಔಷಧಿಗಳ ಮೇಲೆ ತಡೆಯನ್ನು ಹೇರಿದ್ದರಿಂದ ಭಾರತೀಯ ತಯಾರಿಕೆ ಸಂಸ್ಥೆಯಾದ ರಾನ್‌ಬಕ್ಸಿಗೆ ಹಿನ್ನೆಡೆಯಾದಂತಾಗಿದೆ.

ಅಮೆರಿಕದ ಅಹಾರ ಮತ್ತು ಔಷಧಿ ನಿಯಂತ್ರಣ ಮಂಡಳಿ ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿರುವ ಉತ್ಪಾದಕ ಘಟಕಗಳಿಗೆ ಸಂಬಂಧಿತ ಔಷಧಿಗಳ ಕುರಿತಂತೆ ಎಚ್ಚರಿಕೆ ನೀಡುವ ಎರಡು ಪತ್ರಗಳನ್ನು ಬರೆಯಲಾಗಿದೆ ಎಂದು ತಿಳಿಸಿದೆ.

ರಾನ್‌ಬಕ್ಸಿ ಔಷಧಿ ತಯಾರಿಕೆಯಲ್ಲಿ ಅಮೆರಿಕದ ಸಿಜಿಎಂಪಿ ಗುಣಮಟ್ಟಕ್ಕೆ ಹೋಲಿಕೆಯಾಗದಿರುವ ಹಿನ್ನೆಲೆಯಲ್ಲಿ ಕಂಪೆನಿಗೆ ಎಚ್ಚರಿಕೆಯ ಪತ್ರ ಬರೆಯಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಔಷಧಿಗಳ ಗುಣಮಟ್ಟದಲ್ಲಿ ಅಮೆರಿಕ ನಿಗದಿಪಡಿಸಿದ ನಿಯಮಗಳನ್ನು ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾನ್‌ಬಕ್ಸಿ ಔಷಧಿಗಳಿಗೆ ತಡೆಯನ್ನು ನೀಡಲಾಗಿದೆ ಎಂದು ಅಮೆರಿಕದ ಔಷಧಿ ನಿಯಂತ್ರಣ ಮಂಡಳಿ ಪ್ರಕಟಿಸಿದೆ.
ಮತ್ತಷ್ಟು
ತೈಲ ದರಗಳಲ್ಲಿ ಇಳಿಕೆಯಿಲ್ಲ: ದಿಯೋರಾ
ಲೆಹ್ಮಾನ್ ಸಿಬ್ಬಂದಿ ಉದ್ಯೋಗದ ಪರದಾಟದಲ್ಲಿ
ರಿಲಯನ್ಸ್‌ನಿಂದ ಪ್ರೀಪೇಡ್ ಬ್ಲ್ಯಾಕ್ ಬೆರ್ರಿ ಸೇವೆ ಆರಂಭ
ರಕ್ಷಣಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಳವಾಗಲಿ
ಉಕ್ಕಿನ ಘಟಕ ಸ್ಥಾಪನೆಗೆ ಸಿದ್ದತೆ : ರಿಲಯನ್ಸ್
ಕಚ್ಚಾ ತೈಲ ದರದಲ್ಲಿ ಇಳಿಕೆ