ಲೆಹ್ಮಾನ್ ಬ್ರದರ್ಸ್ ಆಸ್ತಿಯ ಖರೀದಿ ಕುರಿತಂತೆ ಎರಡು ದಿನಗಳ ಕಾಲ ಚಿಂತನೆಯಲ್ಲಿ ತೊಡಗಿದ್ದ ಬಾರ್ಕಲೆ, ನಾರ್ಥ್ ಅಮೆರಿಕನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಮತ್ತು ಕ್ಯಾಪಿಟಲ್ ಮಾರ್ಕೆಟ್ ಬಿಸಿನೆಸ್‌ನ್ನು 250 ಮಿಲಿಯನ್ ಡಾಲರ್ ನಗದು ಹಣಕ್ಕೆ ಖರೀದಿಸಲು ಸಮ್ಮತಿಸಿದೆ ಎಂದು ಮೂಲಗಳು ತಿಳಿಸಿವೆ.
ಬ್ರಿಟಿಷ್ ಬ್ಯಾಂಕ್ , ಲೆಹ್ಮಾನ್ ಬ್ರದರ್ಸ್‌ನ ನ್ಯೂಯಾರ್ಕ್ ಹೆಡ್‌ಕ್ವಾರ್ಟರ್ಸ್ ಮತ್ತು ನ್ಯೂಜೆರ್ಸಿಯಲ್ಲಿರುವ ಡಾಟಾ ಕೇಂದ್ರಗಳನ್ನು 1.5 ಬಿಲಿಯನ್ ಡಾಲರ್‌ಗಳಿಗೆ ಖರೀದಿಸಲು ನಿರ್ಧರಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಲೆಹ್ಮಾನ್ ಕಂಪೆನಿಯ ಪ್ರಮುಖವಾದ ಲೆಹ್ಮಾನ್ ಹೋಲ್ಡಿಂಗ್ಸ್ ಇಂಕ್ ದಿವಾಳಿಯನ್ನು ರಕ್ಷಿಸುವಂತೆ ನ್ಯಾಯಾಲಯದಲ್ಲಿ ಮನವಿ ಅರ್ಜಿಯನ್ನು ಸಲ್ಲಿಸಲಾಗಿದ್ದು,ಸಾಲ ಭಾರದ ಕುಸಿತದಿಂದ ಬಳಲುತ್ತಿರುವ ಹಿನ್ನಲೆಯಲ್ಲಿ ಬ್ಯಾಲೆನ್ಸ್ ಶೀಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಧ್ಯವಾಗುವುದಿಲ್ಲ ಎಂದು ಲೆಹ್ಮಾನ್ ಮೂಲಗಳು ತಿಳಿಸಿವೆ.
|