ಜಾಗತಿಕ ಆರ್ಥಿಕ ಬಿಕ್ಕಟ್ಟು , ಭಾರತದ ಆರ್ಥಿಕಾಭಿವೃದ್ಧಿ ಅಥವಾ ಹೂಡಿಕೆ ಆಕರ್ಷಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ವಾಣಿಜ್ಯ ಖಾತೆಯ ರಾಜ್ಯ ಸಚಿವ ಅಶ್ವಿನಿಕುಮಾರ್ ಹೇಳಿದ್ದಾರೆ.
ಜಾಗತಿಕ ಆರ್ಥಿಕ ಬಿಕ್ಕಟ್ಟು ದೇಶದ ಆರ್ಥಿಕತೆಯ ಮೇಲೆ ಅಲ್ಪ ಪರಿಣಾಮ ಬೀರಬಹುದು. ಮುಂದಿನ ದಿನಗಳಲ್ಲಿ ಭಾರತ ಮತ್ತು ಅಮೆರಿಕ ಪ್ರಬಲ ಆರ್ಥಿಕತೆಯನ್ನು ಹೊಂದುವ ವಿಶ್ವಾಸವಿದೆ ಎಂದು ಕುಮಾರ್ ತಿಳಿಸಿದ್ದಾರೆ.
ಅಮೆರಿಕದ ಆರ್ಥಿಕತೆ ಸಬಲವಾಗಿದ್ದು ಪ್ರಸ್ತುತ ಎದುರಾಗಿರುವ ಆರ್ಥಿಕ ಬಿಕ್ಕಟ್ಟು ತಾತ್ಕಾಲಿಕವಾಗಿದೆ ಎಂದು ಸಚಿವ ಅಶ್ವಿನಿಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಸರಣಿ ಉಪನ್ಯಾಸ ನೀಡಲು ಆಗಮಿಸಿದ ಅಶ್ವಿನಿಕುಮಾರ್, ದೇಶದ ಆರ್ಥಿಕತೆ ಸದೃಢ ಹಾಗು ಮರಳಿಸುವಿಕೆ ಇರುವಂತಹ ದೇಶಗಳಿಗೆ ಮಾತ್ರ ಆರ್ಥಿಕ ಹೂಡಿಕೆ ಹೆಚ್ಚಾಗುತ್ತದೆ.ಭಾರತ ಆರ್ಥಿಕತೆಯಲ್ಲಿ ಪ್ರಬಲವಾಗಿದ್ದರಿಂದ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು ಸಮರ್ಥವಾಗಿದೆ ಎಂದು ಹೇಳಿದರು.
|