ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ದರ: 90ಡಾಲರ್‌ಗೆ ಇಳಿಕೆ ಸಾಧ್ಯತೆ
ಜಾಗತಿಕ ಕಚ್ಚಾ ತೈಲ ದರಗಳು ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ಗೆ ತಲುಪಿದ್ದು, ಜಾಗತಿಕ ಅರ್ಥಿಕತೆ ಕುಸಿತದ ಹಿನ್ನಲೆಯಲ್ಲಿ ಬೇಡಿಕೆ ಇಳಿಮುಖವಾಗಿ ಕಚ್ಚಾ ತೈಲದರಗಳು ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಜಗತ್ತಿನ ಅತಿ ಹೆಚ್ಚು ಇಂಧನ ಉಪಯೋಗಿಸುವ ಅಮೆರಿಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ತೈಲ ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ ಒಪೆಕ್ ಶೇ. 1.17ರಿಂದ ಶೇ. 1.02ರಷ್ಟು ಬೇಡಿಕೆಯಲ್ಲಿ ಕುಸಿತವಾಗಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಜುಲೈ ತಿಂಗಳಿನಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 147 ಡಾಲರ್‌ಗಳಾಗಿದ್ದು ಪ್ರಸಕ್ತ ಶೇ. 40ರಷ್ಟು ಕಚ್ಚಾ ತೈಲ ದರಗಳಲ್ಲಿ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಲಂಡನ್‌ನ ಬ್ರೆಂಟ್ ನಾರ್ಥ್ ಕಂಪೆನಿಯ ಕಚ್ಚಾ ತೈಲದ ಏಷ್ಯಾ ವಹಿವಾಟಿನ ನವೆಂಬರ್ ವಿತರಣೆಯಲ್ಲಿ ಪ್ರತಿ ಬ್ಯಾರೆಲ್‌ಗೆ 89.80 ಡಾಲರ್‌ಗೆ ನಿಗದಿಯಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಆರ್ಥಿಕ ಬಿಕ್ಕಟ್ಟು: ದೇಶದ ಅಭಿವೃದ್ಧಿಗೆ ಧಕ್ಕೆಯಿಲ್ಲ
ಲೆಹ್ಮಾನ್ ಆಸ್ತಿ ಖರೀದಿಯತ್ತ ಬಾರ್ಕಲೆ
ರಾನ್‌ಬಕ್ಸಿ ಔಷಧಿ ಅಮುದಿಗೆ ಅಮೆರಿಕ ತಡೆ
ತೈಲ ದರಗಳಲ್ಲಿ ಇಳಿಕೆಯಿಲ್ಲ: ದಿಯೋರಾ
ಲೆಹ್ಮಾನ್ ಸಿಬ್ಬಂದಿ ಉದ್ಯೋಗದ ಪರದಾಟದಲ್ಲಿ
ರಿಲಯನ್ಸ್‌ನಿಂದ ಪ್ರೀಪೇಡ್ ಬ್ಲ್ಯಾಕ್ ಬೆರ್ರಿ ಸೇವೆ ಆರಂಭ