ಜಾಗತಿಕ ಆರ್ಥಿಕ ಹಾಗೂ ಶೇರುಪೇಟೆ ಕುಸಿತದ ಹಿನ್ನೆಲೆಯಲ್ಲಿ ಇಂದಿನ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಪ್ರತಿ ಗ್ರಾಂಗೆ 1 ಸಾವಿರ ಹೆಚ್ಚಳವಾಗಿ 12,915ಗೆ ತಲುಪಿದೆ ಎಂದು ಚಿನಿವಾರ ಪೇಟೆಯ ಮೂಲಗಳು ತಿಳಿಸಿವೆ.
ಅಮೆರಿಕದ ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶಿಯ ಶೇರುಪೇಟೆಯ ಶೇರು ಸೂಚ್ಯಂಕಗಳ ಕುಸಿತದ ಹಿನ್ನೆಲೆಯಲ್ಲಿ ಹೂಡಿಕೆದಾರರು ಪರ್ಯಾಯವಾಗಿ ಚಿನ್ನದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಚಿನಿವಾರ ಪೇಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸ್ಟ್ಯಾಂಡರ್ಡ್ ಗೋಲ್ಡ್ ಮತ್ತು ಆಭರಣಗಳು ಪ್ರತಿ 10 ಗ್ರಾಂಗಳಿಗೆ ಕ್ರಮವಾಗಿ 1 ಸಾವಿರ ರೂಪಾಯಿಗಳಿಗೆ ಏರಿಕೆಯಾಗಿ 12,915 ಮತ್ತು 12,765 ರೂಪಾಯಿಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಒಂದು ದಿನದ ಏರಿಕೆ ಷೇ 8.4ರಷ್ಟಾಗಿದ್ದು, 1980ರಲ್ಲಿ ಶೇರುಪೇಟೆಯ ಕುಸಿತದಿಂದಾಗಿ ಹೂಡಿಕೆದಾರರು ಚಿನ್ನದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರಿಂದ ಶೇ.8.4ರಷ್ಟು ಚಿನ್ನದ ದರದಲ್ಲಿ ಹೆಚ್ಚಳವಾಗಿರುವುದನ್ನು ಸ್ಮರಿಸಬಹುದು.
|