ಭಾರತ ಸಂಚಾರ ನಿಗಮ ಲಿಮಿಟೆಡ್ , ಪ್ರಸ್ತುತ 30 ಸಾವಿರ ಗ್ರಾಮಗಳು ಹೈ ಸ್ಪೀಡ್ ಇಂಟರ್‌ನೆಟ್ ಸಂಪರ್ಕವನ್ನು ಪಡೆದಿದ್ದು,ಅದನ್ನು ಮುಂಬರುವ ಆರು ತಿಂಗಳೊಳಗಾಗಿ 1.48ಲಕ್ಷ ಗ್ರಾಮಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದೆ.
ದೇಶದ ಐದು ಸಾವಿರ ನಗರಗಳು ಸೇರಿದಂತೆ ದೇಶದ ಪ್ರತಿಯೊಂದು ಗ್ರಾಮಗಳಿಗೆ ಹೈ ಸ್ಪೀಡ್ ಇಂಟರ್‌ನೆಟ್ ಸಂಪರ್ಕವನ್ನು ಮಾರ್ಚ್ 2009ರೊಳಗೆ ಸಂಪರ್ಕ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಶೇ. 95ರಷ್ಟು ಜಿಲ್ಲಾ ಕೇಂದ್ರಗಳು ಹಾಗೂ ಶೇ. 44ರಷ್ಟು ಪಟ್ಟಣಗಳಿಗೆ ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸಲಾಗಿದೆ ಎಂದು ಭಾರತ ಸಂಚಾರ ನಿಗಮ ಲಿಮಿಟೆಡ್ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಪೆಕ್ಟ್ರಮ್ ಅಳವಡಿಸಿದ ನಂತರ ಆರಂಭಿಕವಾಗಿ 5ಸಾವಿರ ಪಟ್ಟಣಗಳಿಗೆ ವೈಯರ್‌ಲೆಸ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುವುದರಿಂದ 10 ಕಿ.ಮಿ. ವ್ಯಾಪ್ತಿಯೊಳಗೆ ಬರುವ ಎಲ್ಲ ಗ್ರಾಮಗಳಿಗೆ ಸಂಪರ್ಕ ನೀಡಿದಂತಾಗುತ್ತದೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.
|