ದೇಶದ ಪ್ರಮುಖ ಸಾಫ್ಟವೇರ್ ರಫ್ತು ಸಂಸ್ಥೆಯಾದ ಟಾಟಾ ಕನ್ಸಲ್‌ಟನ್ಸಿ ಸರ್ವಿಸ್ ಕಂಪೆನಿ , ಸ್ವೀಡನ್ ಕಂಪೆನಿಯಾದ ಎರಿಕ್ಸನ್‌ನೊಂದಿಗೆ ಅಪ್ಲಿಕೇಶನ್ ಮೆಂಟೆನನ್ಸ್ ಹಾಗೂ ಡೆವಲೆಪ್‌ಮೆಂಟ್ ಸರ್ವಿಸ್ ವಿತರಣೆ ಕುರಿತಂತೆ ಐದು ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಎರಿಕ್ಸನ್ ಕಂಪೆನಿಗೆ ಅಪ್ಲಿಕೇಶನ್ ಮೆಂಟೆನನ್ಸ್ ಹಾಗೂ ಡೆವಲೆಪ್‌ಮೆಂಟ್ ಸರ್ವಿಸ್ ವಿತರಣೆ ಕುರಿತಂತೆ ಟಿಸಿಎಸ್ ಸೇರಿದಂತೆ ಇಬ್ಬರು ಪಾಲುದಾರರನ್ನು ಆಯ್ಕೆಮಾಡಲಾಗಿದ್ದು, ಇನ್ನೊಂದು ಕಂಪೆನಿಯ ಹೆಸರನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಟಾಟಾ ಕನ್ಸಲ್‌ಟನ್ಸಿ ಹೇಳಿಕೆ ನೀಡಿದೆ.
ಟಾಟಾ ಕನ್ಸಲ್‌ಟೆನ್ಸಿ ಇತ್ತಿಚೆಗೆ ಸಿಂಗಾಪುರ್ ಏರ್‌ಲೈನ್ಸ್ ಕಾರ್ಗೊ ಸಂಸ್ಥೆಗೆ ಸೇವೆಯನ್ನು ನೀಡುವ ಕುರಿತಂತೆ ಬಹುಮಿಲಿಯನ್ ಡಾಲರ್ ಒಪ್ಪಂದವನ್ನು ಮಾಡಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.
ಕೆಲ ತಿಂಗಳುಗಳ ಹಿಂದೆ ಟಾಟಾ ಕನ್ಸಲ್‌ಟನ್ಸಿ ಕಂಪೆನಿ , ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ ಕಂಪೆನಿಗೆ ಸೇವೆಯನ್ನು ನೀಡುವುದಕ್ಕಾಗಿ ಐದು ವರ್ಷಗಳ ಅವಧಿಗೆ 100 ಮಿಲಿಯನ್ ಡಾಲರ್ ಒಪ್ಪಂದವನ್ನು ಮಾಡಿಕೊಂಡಿರುವುದನ್ನು ಸ್ಮರಿಸಬಹುದು.
|