ಭಾರತ ಮೂಲದ ರಾನ್‌ಬಕ್ಸಿ ಕಂಪೆನಿಯ ಕೆಲ ಔಷಧಿ ಉತ್ಪನ್ನಗಳ ಮೇಲೆ ಅಮೆರಿಕ ನಿಷೇಧ ಹೇರಿದ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ನಗರದ ಮಾಜಿ ಮೇಯರ್ ರುಡೋಲ್ಫ್ ಗಿವುಲಿಯಾನಿ ಅವರನ್ನು ಕಂಪೆನಿ ಸಲಹೆಗಾರರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಅಮೆರಿಕದ ಅಹಾರ ಮತ್ತು ಔಷಧಿ ನಿಯಂತ್ರಣ ಇಲಾಖೆ ಭಾರತದಲ್ಲಿ ಪವಾಂತಾ ಮತ್ತು ದೆವಾಸ್ ಘಟಕಗಳಲ್ಲಿ ಅಮೆರಿಕಗೆ ರಫ್ತು ಮಾಡಲಾಗುವ ಔಷಧಿಗಳ ಗುಣಮಟ್ಟವನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಿ ಬುಧವಾರದಂದು ರಾನ್‌ಬಕ್ಸಿಯ 30 ಔಷಧಿ ಉತ್ಪನ್ನಗಳು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
ರಾನ್‌ಬಕ್ಸಿ, ಅಮೆರಿಕದ ಔಷಧಿ ನಿಯಂತ್ರಣ ಇಲಾಖೆಯ ನಿಯಮಗಳಿಗೆ ಬದ್ದವಾಗಿದ್ದು ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧಿಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ರಫ್ತು ಮಾಡುವುದನ್ನು ಮುಂದುವರಿಸಲು ಇಚ್ಚಿಸುತ್ತದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
|