ದೇಶದ ಬ್ಯಾಂಕ್‌ಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ , ವಿದೇಶಿ ಕರೆನ್ಸಿಗಳಾದ ಅಮೆರಿಕನ್ ಡಾಲರ್ ,ಪೌಂಡ್, ಸ್ಟೆರ್ಲಿಂಗ್, ಯುರೋ, ಆಸ್ಟ್ರೇಲಿಯನ್ ಡಾಲರ್, ಕೆನಡಿಯನ್ ಡಾಲರ್ ಮತ್ತು ಯೆನ್‌ಗಳ ಮೇಲೆ ಬಡ್ಡಿದರಗಳಲ್ಲಿ ಹೆಚ್ಚಳ ಮಾಡಿದ್ದು, ಸೆಪ್ಟೆಂಬರ್ 18 ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ವಿದೇಶಿ ಠೇವಣಿಗಳ ಮೇಲೆ ಬಡ್ಡಿದರವನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ವಿದೇಶಿ ಕರೆನ್ಸಿಗಳ ಮೇಲೆ ಬಡ್ಡಿದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ವಿದೇಶಿ ಠೇವಣಿಗಳ ಮೇಲೆ 1ರಿಂದ 2ವರ್ಷದವರೆಗಿನ ಅವಧಿಗೆಶೇ 2.96ರಿಂದ 2.46ರವರೆಗೆ ಏರಿಕೆ ಮಾಡಿದ್ದು,ಯುರೋ ಠೇವಣಿಗಳ ಮೇಲೆ ಶೇ.4.58ರಿಂದ ಶೇ. 5.08ರವರೆಗೆ ಏರಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
2-3 ವರ್ಷದ ಅವಧಿಯ ಡಾಲರ್ ಠೇವಣಿಯ ಬಡ್ಡಿ ದರವನ್ನು ಶೇ. 2.56 ರಿಂದ 3.06ವರೆಗೆ ಏರಿಕೆ ಮಾಡಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
|