ನವದೆಹಲಿ : ವಾಲ್‌ಸ್ಟ್ರೀಟ್‌ನಲ್ಲಿ ಉಂಟಾದ ಆರ್ಥಿಕ ಕುಸಿತದಿಂದಾಗಿ ಪ್ರಮುಖ ಬ್ಯಾಂಕ್‌ಗಳಿಗೆ ಹೊರಗುತ್ತಿಗೆ ಸೇವೆಯನ್ನು ನಿರ್ವಹಿಸುತ್ತಿರುವ ಬಿಪಿಒಗಳ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಮೂಲಗಳು ತಿಳಿಸಿವೆ.
ಹೊರಗುತ್ತಿಗೆ ಸೇವೆಯನ್ನು ನಿರ್ವಹಿಸುತ್ತಿರುವ ಬಿಪಿಒಗಳು ವೆಚ್ಚವನ್ನು ಕಡಿಮೆ ಮಾಡಿ ಅಲ್ಪಸಂಬಳವನ್ನು ಪಡೆಯುವ ಉದ್ಯೋಗಿಗಳಿಂದ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವಂತಹ ಸ್ಥಿತಿ ಎದುರಾಗಿದೆ ಎಂದು ಬಿಪಿಒ ಮೂಲಗಳು ತಿಳಿಸಿವೆ.
ಆವಂಥಾ ಗ್ರೂಪ್‌ನ ಮೂರು ಬಿಲಿಯನ್ ಡಾಲರ್ ವಹಿವಾಟು ನಡೆಸುವ ಸಾಲಿಯಂಟ್ ಬಿಸಿನೆಸ್ ಸೊಲ್ಯೂಶನ್ಸ್ ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಿ ಹೊರಗುತ್ತಿಗೆ ಸೇವೆಯನ್ನು ನೀಡಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ನಮ್ಮ ಗ್ರಾಹಕರಿಗೆ ಪ್ರತಿ ವಹಿವಾಟಿಗೆ 10 ನಿಮಿಷಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಆದರೆ ಈಗ ಅದೇ ವಹಿವಾಟನ್ನು ಕೇವಲ 6 ರಿಂದ 7 ನಿಮಿಷಕ್ಕೆ ನಿಗದಿಪಡಿಸಲಾಗಿದೆ. ಉಳಿದ ಮೂರು ನಿಮಿಷಗಳ ಅವಧಿಯ ಲಾಭದ ಹಣ ನಮ್ಮ ಖಾತೆಗೆ ಸೇರ್ಪಡೆಯಾಗಲಿದೆ ಎಂದು ಸಾಲಿಯಂಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜ್ ಮಲ್ಹೋತ್ರಾ ಹೇಳಿದ್ದಾರೆ.
|