ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರುಕಟ್ಟೆಗೆ ಬ್ಲ್ಯಾಕ್ ಬೆರ್ರಿ ಬಿಡುಗಡೆ: ಟಾಟಾ
ಬಹುದಿನಗಳ ನಿರೀಕ್ಷೆಯ ನಂತರ ಟಾಟಾ ಇಂಡಿಕಾಂ ಇ-ಮೇಲ್, ಎಸ್‌ಎಂಎಸ್, ಸಂದೇಶ ಹಾಗೂ ವೇಗದ ಅಂತರ್ಜಾಲ ಸೌಲಭ್ಯವನ್ನು ಹೊಂದಿದ ಪ್ರೇಮಿಯಂ ಬ್ಲ್ಯಾಕ್ ಬೆರ್ರಿ ಮೊಬೈಲ್ ಸರ್ವಿಸಸ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ದೇಶದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ ಭಾರ್ತಿಏರ್‌ಟೆಲ್ , ವೊಡಾಫೋನ್, ರಿಲಯನ್ಸ್ ಕಮ್ಯೂನಿಕೇಶನ್ಸ್ ಒಂದು ವರ್ಷದಿಂದ ಬ್ಲ್ಯಾಕ್ ಬೆರ್ರಿ ಮಾಡೆಲ್ ಬಿಡುಗಡೆಯಾದ ನಂತರವೂ ಭದ್ರತಾ ಕಾರಣಗಳಿಂದಾಗಿ ಟಾಟಾ ಬ್ಲ್ಯಾಕ್ ಬೆರ್ರಿ ಮಾಡೆಲ್ ಬಿಡುಗಡೆ ಮಾಡುವುದಕ್ಕೆ ಸರಕಾರ ವಿರೋಧ ವ್ಯಕ್ತಪಡಿಸಿತ್ತು.

ಟೆಲಿಕಾಂ ಕಾರ್ಯದರ್ಶಿ ಸಿದ್ದಾರ್ಥ್ ಬೆಹುರಾ ಇತ್ತೀಚೆಗೆ ಹೇಳಿಕೆಯನ್ನು ನೀಡಿ ಬ್ಲ್ಯಾಕ್ ಬೆರ್ರಿ ಬಿಡುಗಡೆಗೆ ಸರಕಾರದ ಅನುಮತಿಯ ಅಗತ್ಯವಿಲ್ಲ ಎಂದು ಹೇಳಿದ ಹಿನ್ನಲೆಯಲ್ಲಿ ಟಾಟಾಕಂಪೆನಿ ಬ್ಲ್ಯಾಕ್ ಬೆರ್ರಿ ಮಾಡೆಲ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ಕಂಪೆನಿ ತಿಳಿಸಿದೆ.

ಬ್ಲ್ಯಾಕ್ ಬೆರ್ರಿ ಮಾಡೆಲ್ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಟಾಟಾ ಟೆಲಿ ಸರ್ವಿಸಸ್ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಸರದಾನಾ ಅವರು , ಕಾರ್ಪೋರೇಟ್ ಕಾರ್ಯನಿರ್ವಾಹಕರು, ಉದ್ಯಮಿಗಳು ಸೇರಿದಂತೆ ಎಲ್ಲರಿಗೂ ಉಪಯೋಗವಾಗುವಂತಹ ಬ್ಲ್ಯಾಕ್ ಬೆರ್ರಿ ಬಿಡುಗಡೆ ಮಾಡುವುದಕ್ಕೆ ಹೆಮ್ಮೆಯನಿಸುತ್ತದೆ ಎಂದು ಹೇಳಿದರು.
ಮತ್ತಷ್ಟು
ಹಣದುಬ್ಬರ ಶೇ.12.14ರಷ್ಟು ಏರಿಕೆ
ವೆಚ್ಚ ಕಡಿತದ ಮಂತ್ರ ಪಠಿಸುತ್ತಿರುವ ಬಿಪಿಒಗಳು
ಸೆಪ್ಟೆಂಬರ್ ತಿಂಗಳೊಳಗೆ ಎಲ್‌ಪಿಜಿ ಸಂಪರ್ಕ:ದಿಯೋರಾ
ವಿದೇಶಿ ಠೇವಣಿ ದರ ಹೆಚ್ಚಳ-ಎಸ್‌ಬಿಐ
ರಾನ್‌ಬಕ್ಸಿಗೆ ಮಾಜಿ ನ್ಯೂಯಾರ್ಕ್ ಮೇಯರ್ 'ಸಲಹೆಗಾರ'
ಐಟಿ : ಟಾಟಾ ಕನ್ಸಲ್‌ಟೆನ್ಸಿ- ಎರಿಕ್ಸನ್ ಒಪ್ಪಂದ