ಬೇಜವಾಬ್ದಾರಿ ವರ್ತನೆಯಿಂದಾಗಿ ಹಣಕಾಸು ಬಿಕ್ಕಟ್ಟು ಎದುರಾಗುತ್ತಿರುವುದರಿಂದ ಹಣಕಾಸು ನೀತಿಗಳಲ್ಲಿ ಸುಧಾರಣೆ ತರುವುದು ಅಗತ್ಯವಾಗಿದೆ ಎಂದು ಬ್ರಿಟನ್ ಪ್ರಧಾನಿ ಗೊರ್ಡಾನ್ ಬ್ರೌನ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ರಿಸರ್ವ್ ಬ್ಯಾಂಕ್ ನೇತೃತ್ವದ ಸೆಂಟ್ರಲ್‌ಬ್ಯಾಂಕ್‌ಗಳು ಮಧ್ಯಸ್ಥಿಕೆ ಸಭೆಯ ನಂತರ ಮಾತನಾಡಿದ ಅವರು ಮಾರುಕಟ್ಟೆಯಲ್ಲಿ ಸ್ಥಿರತೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಹಣಕಾಸು ವ್ಯವಸ್ಥೆಯನ್ನು ಪಾರದರ್ಶಕಗೊಳಿಸಿ ನೀತಿಗಳನ್ನು ಬದಲಾವಣೆ ತರುವುದು ಅಗತ್ಯವಾಗಿದೆ.ನಾವು ಬೇಜವಾಬ್ದಾರಿಯಿಂದ ವರ್ತಿಸಿದಲ್ಲಿ ಮಾರುಕಟ್ಟೆ ಏರಿಳಿತಕ್ಕೆ ಕಾರಣವಾಗುತ್ತದೆ ಎಂದು ಬ್ರೌನ್ ನುಡಿದರು.
ಮುಂದಿನ ಭವಿಷ್ಯದಲ್ಲಿಯಾದರೂ ಕೂಡಾ ಇಂತಹ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಬ್ರಿಟನ್ ಪ್ರಧಾನಿ ಬ್ರೌನ್ ಸಲಹೆ ನೀಡಿದರು.
|