ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಕೂಡಾ ದೇಶದ ಆರ್ಥಿಕತೆ ಶೇ.8 ರ ಹತ್ತಿರದಲ್ಲಿರುವುದರಿಂದ ಹಣಕಾಸು ಕ್ಷೇತ್ರಗಳ ನೀತಿಗಳಲ್ಲಿ ಯಾವುದೇ ಆತಂಕವಿಲ್ಲದೆ ಬದಲಾವಣೆ ಮಾಡಲು ಸಾಧ್ಯ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಜಾಗತಿಕ ಆರ್ಥಿಕತೆ ಕುಸಿತದ ಹಿನ್ನಲೆಯಲ್ಲಿ ದೇಶದ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಸಕ್ತ 2008-09ರಲ್ಲಿ ದೇಶದ ಆರ್ಥಿಕತೆ ಶೇ . 8 ರಷ್ಟು ತಲುಪುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಅಮೆರಿಕ ಹಾಗೂ ಇತರ ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾದ ಹಿನ್ನೆಲೆಯಲ್ಲಿ ದೇಶದ ಆರ್ಥಿಕನೀತಿಗಳನ್ನು ಮರುಪರಿಶೀಲನೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ಚಿದಂಬರಂ ಅಭಿಪ್ರಾಯಪಟ್ಟರು.
ದೇಶದ ಆರ್ಥಿಕತೆ ಸದೃಢವಾಗಿರುವುದರಿಂದ ಜಾಗತಿಕ ಆರ್ಥಿಕ ಬಿಕ್ಕಟ್ಟು, ಅಲ್ಪಪ್ರಮಾಣದ ಪ್ರಭಾವ ಬೀರಬಹುದೇ ಹೊರತು ಸಂಪೂರ್ಣವಲ್ಲ ಎಂದು ಸಚಿವ ಚಿದಂಬರಂ ಹೇಳಿದ್ದಾರೆ.
|