ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶತಮಾನದ ಪ್ರಭಾವಿ ಉದ್ಯಮಿಗಳಾಗಿ ಟಾಟಾ, ಅಂಬಾನಿ
21ನೇ ಶತಮಾನದಲ್ಲಿ ರತನ್ ಟಾಟಾ, ಮುಕೇಶ್ ಅಂಬಾನಿ, ಲಕ್ಷ್ಮಿ ಮಿತ್ತಲ್ ಮತ್ತು ರೊನ್ನಿ ಸ್ಕ್ರಿವ್‌ವಾಲಾ ಜಗತ್ತಿನ 75 ಪ್ರಭಾವಿ ಉದ್ಯಮಿಗಳ ಸಾಲಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಅಮೆರಿಕದ ಬಿಸಿನೆಸ್ ಮ್ಯಾಗ್‌ಜಿನ್ ಎಸ್ಕೈರ್ ವರದಿ ಮಾಡಿದೆ.

ಅಮೆರಿಕದಲ್ಲಿ ನೆಲೆಸಿದ ಭಾರತೀಯ ಮೂಲದ ಲೂಸಿಯಾನಾ ರಾಜ್ಯಪಾಲ ಬಾಬ್ಬಿ ಜಿಂದಾಲ್ ಮತ್ತು ರಾಜಕೀಯ ವಿಮರ್ಶಕ ತಜ್ಞ ಪರಾಗ್ ಖನ್ನಾ ಅವರುಗಳು ಪ್ರಭಾವಿ ಉದ್ಯಮಿಗಳ ಸಾಲಿನಲ್ಲಿ ಸೇರಲಿದ್ದಾರೆ ಎಂದು ಫ್ಯಾಶನ್ ಎಂಟರ್‌ಟೈನ್‌ಮೆಂಟ್ ಮ್ಯಾಗ್‌ಜಿನ್ ಎಸ್ಕೈರ್ ಪ್ರಕಟಿಸಿದೆ.

ಭಾರತೀಯ ಮೂಲದ ಆರು ಉದ್ಯಮಿಗಳು, ಬಿಲ್ ಮತ್ತು ಹಿಲೆರಿ ಕ್ಲಿಂಟನ್, ನ್ಯೂಯಾರ್ಕ್ ನಗರದ ಮೇಯರ್ ಮೈಕಲ್ ಬ್ಲೂಮ್‌ಬರ್ಗ್, ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಬರಾಕ್ ಒಬಾಮಾ, ರಷ್ಯಾದ ನಾಯಕ ವ್ಲಾಡಿಮರ್ ಪುಟಿನ್, ಅಮೆರಿಕದ ಮಾಜಿ ಉಪಾಧ್ಯಕ್ಷ ಅಲ್ ಗೊರೆ ಅವರ ಸಾಲಿನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಧ್ಯಮಗಳ ರಾಜ ರುಪರ್ಟ್ ಮುರ್ಡೊಕ್ , ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಮತ್ತು ಪತ್ನಿ ಮೆಲಿಂದಾ, ಆಪಲ್ಸ್ ಕಂಪೆನಿಯ ಸ್ಟೀವ್ ಜಾಬ್ಸ್, ಇಂಡಸ್ಟ್ರೀಯಲ್ ಕಾಂಗ್ಲೊಮೆರಿಟ್ ಮುಖ್ಯಸ್ಥ ಜೆಫ್ರಿ ಇಮ್ಮೆಲ್ಟ್ ಸೇರಿದಂತೆ ಇನ್ನಿತರ ಉದ್ಯಮಿಗಳು ಪ್ರಭಾವಿ ಉದ್ಯಮಿಗಳ ಸಾಲಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಮ್ಯಾಗ್‌ಜಿನ್ ಮೂಲಗಳು ತಿಳಿಸಿವೆ.
ಮತ್ತಷ್ಟು
ಅಭಿವೃದ್ಧಿ ದರದಲ್ಲಿ ಸುಧಾರಣೆ ಸಾಧ್ಯ:ಚಿದಂಬರಂ
ಆರ್ಥಿಕ ಕುಸಿತಕ್ಕೆ ಅವೈಜ್ಞಾನಿಕ ನೀತಿ ಕಾರಣ-ಬ್ರೌನ್
ಮಾರುಕಟ್ಟೆಗೆ ಬ್ಲ್ಯಾಕ್ ಬೆರ್ರಿ ಬಿಡುಗಡೆ: ಟಾಟಾ
ಹಣದುಬ್ಬರ ಶೇ.12.14ರಷ್ಟು ಏರಿಕೆ
ವೆಚ್ಚ ಕಡಿತದ ಮಂತ್ರ ಪಠಿಸುತ್ತಿರುವ ಬಿಪಿಒಗಳು
ಸೆಪ್ಟೆಂಬರ್ ತಿಂಗಳೊಳಗೆ ಎಲ್‌ಪಿಜಿ ಸಂಪರ್ಕ:ದಿಯೋರಾ