ದೇಶದ ಪ್ರಮುಖ ಟೆಲಿಕಾಂ ಕಂಪೆನಿಯಾದ ಭಾರ್ತಿ ಏರ್‌ಟೆಲ್ ಬ್ಲ್ಯಾಕ್ ಬೆರ್ರಿ ಮಾಡೆಲ್ ಬಿಡುಗಡೆ ಮಾಡಿದ್ದು, ತಿಂಗಳಾಂತ್ಯದೊಳಗೆ ಮಾರುಕಟ್ಟೆಗೆ ಬರಲಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ಲ್ಯಾಕ್ ಬೆರ್ರಿ ಬೋಲ್ಡ್‌ಗೆ 34,990 ರೂಪಾಯಿ ನಿಗದಿಪಡಿಸಲಾಗಿದ್ದು, ಏರ್‌ಟೆಲ್ ಮಳಿಗೆಗಳಲ್ಲಿ ತಿಂಗಳಾಂತ್ಯದೊಳಗೆ ದೊರೆಯಲಿದೆ ಎಂದು ಭಾರ್ತಿ ತಿಳಿಸಿದೆ.
ಹೈ ಸ್ಪೀಡ್ ನೆಟ್‌ವರ್ಕ್ ಸೌಲಭ್ಯವನ್ನು ಹೊಂದಿರುವ ಬ್ಲ್ಯಾಕ್ ಬೆರ್ರಿ ರಿಸರ್ಚ್ ಇನ್ ಮೊಶನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಉತ್ಪಾದಿಸಲಾಗಿದ್ದು, ಉತ್ತಮ ಮಾಡೆಲ್ ಹೊಂದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಬ್ಲ್ಯಾಕ್ ಬೆರ್ರಿ ಸ್ಮಾರ್ಟ್‌ಫೋನ್ ಮಲ್ಟಿಮೀಡಿಯಾ ಕೆಪಾಸಿಟಿಯನ್ನು ಹೊಂದಿದ್ದು, ಮ್ಯೂಸಿಕ್‌ಗಾಗಿ ಮೀಡಿಯಾ ಪ್ಲೇಯರ್, ವಿಡಿಯೋ ಮತ್ತು ಫೋಟೋ ಹಾಗೂ ಮೆಗಾ ಪಿಕ್ಸಲ್ ಕ್ಯಾಮರಾ ಜೊತೆ ವಿಡಿಯೋ ರಿಕಾರ್ಡಿಂಗ್ ಸೌಲಭ್ಯವನ್ನು ಹೊಂದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
|