ಅಮೆರಿಕದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದ ಕೆಲ ಭಾರತೀಯ ಬ್ಯಾಂಕ್‌ಗಳು ತೊಂದರೆಗೊಳಗಾಗಿದ್ದರೂ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎನ್ನುವ ಎಚ್ಚರಿಕೆ ಗಂಟೆಯಲ್ಲ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.
ಲೆಹ್ಮಾನ್ ಬ್ರದರ್ಸ್ ಹಾಗೂ ಅಮೆರಿಕನ್ ಇಂಟರ್‌ನ್ಯಾಷನಲ್ ಗ್ರುಪ್ ದಿವಾಳಿಯಾದ ಹಿನ್ನೆಲೆಯಲ್ಲಿ ಸಭೆಯಲ್ಲಿ ಮಾತನಾಡಿದ ಸಚಿವ ಚಿದಂಬರಂ ದೇಶದ ಆರ್ಥಿಕತೆ ಅಭಿವೃದ್ಧಿ ದರ ಶೇ.8ರ ಗಡಿಯನ್ನು ತಲುಪಲು ಕೆಲ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿರುವ ಕೆಲ ಭಾರಕೀಯ ಬ್ಯಾಂಕ್‌ಗಳು ದಿವಾಳಿಯಾಗಿದ್ದರಿಂದ ದೇಶದ ಎಲ್ಲ ಬ್ಯಾಂಕ್‌ಗಳು ದಿವಾಳಿಯಾಗಲಿವೆ ಎನ್ನುವ ಅನಿಸಿಕೆ ಸರಿಯಲ್ಲ ಎಂದು ಎಂದು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಚಿವ ಚಿದಂಬರಂ ತಿಳಿಸಿದರು.
|