ಎಡುಕಾಂಪ್ ಸಲ್ಯೂಶನ್ಸ್ , ಜೈನ್ ಇರ್ರಿಗೇಶನ್ಸ್,ಗ್ಲೆನ್‌ಮೈರ್ಕ್ ಫೈರ್ಮಾಕ್ಯೂಟಿಕಲ್ಸ್ ಸೇರಿದಂತೆ ದೇಶದ 22 ಕಂಪೆನಿಗಳನ್ನು ಏಷ್ಯಾ ಫೆಸಿಫಿಕ್‌ನ 200 ಬೆಸ್ಟ್ ಅಂಡರ್ ಎ ಬಿಲಿಯನ್ ಲಿಸ್ಟ್‌ಗೆ ಆಯ್ಕೆ ಮಾಡಲಾಗಿದೆ ಎಂದು ಬಿಸಿನೆಸ್ ಮ್ಯಾಗ್‌ಜಿನ್ ಫೋರ್ಬ್ಸ್ ಪ್ರಕಟಿಸಿದೆ.
ಚೀನಾ ದೇಶದ 88 ಕಂಪೆನಿಗಳು ಹಾಗೂ ತೈವಾನ್ 24 ಜಪಾನ್‌ನ 23 ಕಂಪೆನಿಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದ್ದು ಭಾರತದ 22 ಕಂಪೆನಿಗಳನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿ 24,155 ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಟ್ಟಿಯಲ್ಲಿ 200 ಉತ್ತಮ ಕಂಪೆನಿಗಳನ್ನು ವಾರ್ಷಿಕ ಉತ್ತಮ ಕಂಪೆನಿಗಳೆಂದು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ಫೋರ್ಬ್ಸ್ ಮ್ಯಾಗ್‌ಜಿನ್ ಪ್ರಕಟಿಸಿದೆ.
ಕಳೆದ ಮೂರು ವರ್ಷಗಳಲ್ಲಿ 1ಬಿಲಿಯನ್ ಡಾಲರ್ ವಹಿವಾಟಿನ ಮಾರಾಟ ಹಾಗೂ ಲಾಭವನ್ನು ಗಣನೆಗೆ ತೆಗೆದುಕೊಂಡು ಕಂಪೆನಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿವೆ.
|