ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಕಟವಾಗುತ್ತಿರುವ ಊಹಾಪೋಹಗಳ ವರದಿಗಳಲ್ಲಿ ಯಾವುದೇ ಹುರುಳಿಲ್ಲ. ದೇಶದ ಪ್ರಮುಖ ಎರಡನೇ ಸ್ಥಾನದಲ್ಲಿರುವ ಐಸಿಐಸಿಐ ಬ್ಯಾಂಕ್ ಆರ್ಥಿಕವಾಗಿ ಪ್ರಬಲವಾಗಿದೆ ಯಾವುದೇ ಆತಂಕ ಬೇಡ ಎಂದು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ಕಾಮತ್ ಹೇಳಿದ್ದಾರೆ.
ದೇಶದ ಪ್ರಮುಖ ಬ್ಯಾಂಕ್‌ಗಳ ಸಾಲಿನಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಐಸಿಐಸಿಐ ಬ್ಯಾಂಕ್‌ನ್ನು ಹಿಂದಕ್ಕೆ ತಳ್ಳಿ ಮೊದಲನೇ ಸ್ಥಾನವನ್ನು ಅಲಂಕರಿಸಿದೆ. ಊಹಾಪೋಹಗಳ ವರದಿಗಳಿಂದಾಗಿ ಐಸಿಐಸಿಐ ಶೇರುಗಳಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಕೇವಲ ಬ್ಯಾಂಕಿಂಗ್ ಅಲ್ಲದೇ ಬೇರೆ ಯಾವುದೇ ಕೈವಾಡವಿದೆ ಎಂದು ಕಾಮತ್ ಹೇಳಿದ್ದಾರೆ.
ಐಸಿಐಸಿಐ ಬ್ಯಾಂಕ್ ಉತ್ತಮ ಆರ್ಥಿಕ ಸ್ಥಿತಿಯಲ್ಲಿದ್ದು, ಕಳೆದ ವರ್ಷ ನಮ್ಮ ಬಂಡವಾಳ ಹೂಡಿಕೆಯನ್ನು ದ್ವಿಗುಣಗೊಳಿಸಲಾಗಿದೆ. ಐಸಿಐಸಿಐ ಬ್ಯಾಂಕ್ ಒಟ್ಟು ನಿವ್ವಳ ಬಂಡವಾಳ 47 ಸಾವಿರ ಕೋಟಿ ರೂ. ಗಳನ್ನು ಹೊಂದಿದೆ ಎಂದು ನುಡಿದರು.
ಕಳೆದ ಏಳು ದಿನಗಳಲ್ಲಿ ಐಸಿಐಸಿಐ ಶೇರುಗಳ ಶೇರು ಸೂಚ್ಯಂಕದಲ್ಲಿ ಶೇ. 22ರಷ್ಟು ಶೇರುದರಗಳಲ್ಲಿ ಇಳಿಕೆಯಾಗಿದೆ ಎಂದು ಐಸಿಐಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ಕಾಮತ್ ತಿಳಿಸಿದ್ದಾರೆ.
|