ಅಮೆರಿಕದ ಹಣಕಾಸು ಮಾರುಕಟ್ಟೆಯಲ್ಲಿ ಉಂಟಾದ ಆರ್ಥಿಕ ಕುಸಿತ ನಿಭಾಯಿಸಲು ಸರಕಾರದ ಮಧ್ಯಸ್ಥಿಕೆ ಅಗತ್ಯವಾಗಿತ್ತು ಎಂದು ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಹೇಳಿದ್ದಾರೆ.
ಅಮೆರಿಕದ ಆರ್ಥಿಕತೆ ತೊಳಲಾಟದಲ್ಲಿದ್ದು, ಆರ್ಥಿಕತೆಯ ಕುಸಿತದಿಂದಾಗಿ ಪ್ರಸಕ್ತ ವರ್ಷದ ಹಣಕಾಸು ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿರುವುದರಿಂದ ಸಾಮಾನ್ಯ ಗ್ರಾಹಕರು ,ಸಣ್ಣ ಉದ್ಯಮಿಗಳು ಸೇರಿದಂತೆ ಜನಸಾಮಾನ್ಯರು ತೊಂದರೆಯನ್ನು ಎದುರಿಸಬೇಕಾಗಿದೆ ಎಂದು ಬುಷ್ ಅಭಿಪ್ರಾಯಪಟ್ಟರು.
ಅಮೆರಿಕ ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡಲು ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದು ಶೀಘ್ರದಲ್ಲಿ ಪರಿಹಾರವಾಗಲಿದೆ ಎಂದು ಹೇಳಿದರು.
ಅಮೆರಿಕದ ಆರ್ಥಿಕತೆ ಪ್ರಬಲ ಸವಾಲುಗಳನ್ನು ಎದುರಿಸುತ್ತಿದ್ದು, ಸವಾಲುಗಳನ್ನು ಎದುರಿಸಲು ಸರಕಾರ ಮಧ್ಯಸ್ಥಿಕೆ ವಹಿಸಿ ಪರಿಹಾರ ಸೂಚಿಸಲಿದೆ ಎಂದು ರೋಸ್ ಗಾರ್ಡನ್‌ನಲ್ಲಿ ಬುಷ್ ತಿಳಿಸಿದರು. ಈ ಸಂದರ್ಭಧಲ್ಲಿ ಖಚಾನೆ ಕಾರ್ಯದರ್ಶಿ ಹೆನ್ರಿ ಪೌಲ್ಸನ್ , ರಿಸರ್ವ್ ಬ್ಯಾಂಕ್ ಅಧ್ಯಕ್ಷ ಬೆನ್ ಬರ್ನಾನ್‌ಕೆ ಮತ್ತು ಕ್ರಿಸ್ಟೋಫರ್ ಕಾಕ್ಸ್ ಉಪಸ್ಥಿತರಿದ್ದರು.
|