ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರಿಗೆ ರೂಪಾಯಿ ಅಲ್ಪ ಅಂತರದ ಕುಸಿತ ಕಂಡು 45.82/83 ರೂ.ಗಳಿಗೆ ತಲುಪಿದೆ ಎಂದು ಫಾರೆಕ್ಸ್ ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಕಳೆದ ಎರಡು ದಿನಗಳಿಂದ ಶೇರುಪೇಟೆಯಲ್ಲಿ ವಿದೇಶಿ ಹೂಡಿಕೆಗಳಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ವೃದ್ಧಿಸಿಕೊಂಡಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿದೇಶಿ ಸಂಸ್ಥೆಗಳ ಹೂಡಿಕೆದಾರರು ಸೆಪ್ಟೆಂಬರ್ 7ರಿಂದ 1.6 ಬಿಲಿಯನ್ ಡಾಲರ್ ಹೂಡಿಕೆ ವಿಫಲವಾಗಿದ್ದು, ಪ್ರಸಕ್ತ ವರ್ಷದಲ್ಲಿ 8.8 ಬಿಲಿಯನ್ ಡಾಲರ್ ಶೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ರೂಪಾಯಿ ಮೌಲ್ಯವನ್ನು ಪ್ರತಿ ಡಾಲರ್‌ಗೆ 46.32 ರೂ.ಗಳನ್ನು ನಿಗದಿಪಡಿಸಿದ್ದು, ಯುರೋಪಿಯನ್ ಕರೆನ್ಸಿ ದರ 65.90 ರೂಪಾಯಿಗಳಾಗಿವೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
|