ಮುಂಬರುವ ಮಾರ್ಚ್‌ನಿಂದ ಜೂನ್ ತಿಂಗಳವರೆಗೆ ಆರ್ಥಿಕ ಸುಧಾರಣಾ ನೀತಿಗಳು ಜಾರಿಗೆ ಬರಲಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಜಹಾಂಗೀರ್ ಅಜೀಜ್ ತಿಳಿಸಿದ್ದಾರೆ.
ದೇಶದ ಆರ್ಥಿಕ ಸುಧಾರಣಾ ನೀತಿಗಳನ್ನು ಜಾರಿಗೆ ತರಲು ಜಾಗತಿಕ ಆರ್ಥಿಕ ಸ್ಥಿತಿ ಅಡ್ಡಿಯಾಗಿದೆ ಎಂದು ನಾನು ಭಾವಿಸಿಲ್ಲವಾದ್ದರಿಂದ, ಮುಂಬರುವ ದಿನಗಳಲ್ಲಿ ಆರ್ಥಿಕ ಸುಧಾರಣೆಗಳನ್ನು ದೇಶದಲ್ಲಿ ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಬ್ಯಾಂಕಿಂಗ್ , ಇನ್ಸೂರೆನ್ಸ್ ಮತ್ತು ಪೆನ್ಶನ್ ಆರ್ಥಿಕ ಸುಧಾರಣಾ ನೀತಿಗಳಿಗೆ ಪ್ರಬಲ ವಿರೋಧವಿರುವುದರಿಂದ ನೆನೆಗುದಿಗೆ ಬಿದ್ದಿವೆ ಎಂದು ಜಹಾಂಗೀರ್ ಅಜೀಜ್ ತಿಳಿಸಿದ್ದಾರೆ.
ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ಸಂಪುಟ ಸಚಿವರ ಸಭೆ ನಡೆಯಲಿದ್ದು, ಇನ್ಸೂರೆನ್ಸ್‌ನ ಆರ್ಥಿಕ ಸುಧಾರಣಾ ನೀತಿಗಳ ಜಾರಿ ಮಂಡನೆಯನ್ನು ಅಂತಿಮಗೊಳಿಸಲಿದೆ ಎಂದು ಹೇಳಿದರು.
|