ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಲಯನ್ಸ್: ಶೀಘ್ರದಲ್ಲಿ ಕಚ್ಚಾ ತೈಲ ಉತ್ಪಾದನೆ
ಕೃಷ್ಣಾ ಗೋದಾವರಿ ಬೇಸಿನ್‌ನಿಂದ ಕಚ್ಚಾ ತೈಲ ಉತ್ಪಾದನೆ ಮುಂಬರುವ ಕೆಲ ದಿನಗಳಲ್ಲಿ ಆರಂಭವಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧಿಕಾರಿ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 17ರಂದು ಕಚ್ಚಾ ತೈಲ ಉತ್ಪಾದನೆಯ ಪ್ರಥಮ ಆರಂಭಿಕ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ಕೃಷ್ಣಾ ಗೋದಾವರಿ ಬೇಸಿನ್‌ನಿಂದ ಕಚ್ಚಾ ತೈಲ ಉತ್ಪಾದನೆಯನ್ನು ಶೀಘ್ರವಾಗಿ ಆರಂಭಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಕಚ್ಚಾ ತೈಲ ಉತ್ಪಾದನೆಯಲ್ಲಿ ಶೇ 90 ರಷ್ಟು ಶೇರುಗಳನ್ನು ಹೊಂದಿರುವ ರಿಲಯನ್ಸ್, ಮುಂದಿನ ಕೆಲ ದಿನಗಳಲ್ಲಿ ಅಧ್ಯಕ್ಷ ಮುಕೇಶ್ ಅಂಬಾನಿ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಮುಕೇಶ್ ಅಂಬಾನಿ ನೇತೃತ್ವದ ಗುಂಪು ಗುಜರಾತ್‌ನ ಜಾಮನಗರದಲ್ಲಿ ದೇಶದ ಅತಿ ದೊಡ್ಡ ರಿಫೈನರಿ ಘಟಕದ ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ ಕೆಲ ತಿಂಗಳುಗಳಲ್ಲಿ ವಿದೇಶಗಳಿಗೆ ರಫ್ತು ಮಾಡುವ ಕಚ್ಚಾ ತೈಲವನ್ನು ಉತ್ಪಾದಿಸಲಾಗುತ್ತಿದೆ ಎಂದು ರಿಲಯನ್ಸ್ ಮೂಲಗಳು ತಿಳಿಸಿವೆ.
ಮತ್ತಷ್ಟು
ಶೀಘ್ರವೇ ಆರ್ಥಿಕ ಸುಧಾರಣೆ ನೀತಿ ಜಾರಿ
ಡಾಲರ್‌ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಬೋಯಿಂಗ್ ವಿಮಾನ ಖರೀದಿಗೆ ಸಾಲ ಮಂಜೂರು
ಜಾಗತಿಕ ಬಿಕ್ಕಟ್ಟು: ದೇಶದ ಆರ್ಥಿಕತೆಗೆ ಧಕ್ಕೆಯಿಲ್ಲ
ಆರ್ಥಿಕ ಕುಸಿತ, ಸರಕಾರದ ನೆರವಿನ ಅಗತ್ಯ : ಬುಷ್
ಐಸಿಐಸಿಐ ಹಣಕಾಸು ಸ್ಥಿತಿ ಸದೃಢ: ಕಾಮತ್