ಭಾರತದಲ್ಲಿನ ತನ್ನ ವಹಿವಾಟನ್ನು ಮೂರು ಪಟ್ಟು ಹೆಚ್ಚಳಗೊಳಿಸುವ ನಿಟ್ಟಿನಲ್ಲಿ, ಜಾಗತಿಕ ಸಾಫ್ಟ್‌ಡ್ರಿಂಕ್ ಸಂಸ್ಥೆ ಪೆಪ್ಸಿ ಕಂಪನಿ ಇಂಡಿಯಾ, ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ 500 ದಶಲಕ್ಷ ಡಾಲರ್ ಬಂಡವಾಳ ಹೂಡುವುದಾಗಿ ತಿಳಿಸಿದೆ.
ಇದರೊಂದಿಗೆ, ಮಾರುಕಟ್ಟೆ ಮೂಲಸೌಕರ್ಯ ಮತ್ತು ಕೃಷಿ ಸಾಮರ್ಥ್ಯ ಸುಧಾರಣೆ ಮುಂತಾದ ವಿವಿಧ ಚಟುವಟಿಕೆಗಳಿಗೆ ಹಣಹೂಡಿಕೆ ಮಾಡಲಾಗುವುದು ಎಂದು ಪೆಪ್ಸಿಕೊ ಇಂಡಿಯಾದ ಅಧ್ಯಕ್ಷೆ ಹಾಗೂ ಸಿಇಒ ಇಂದ್ರಾ ನೂಯಿ ತಿಳಿಸಿದ್ದಾರೆ.
ತನ್ನ ಆದಾಯ ಹಾಗೂ ಗಾತ್ರದಲ್ಲಿ ಕಂಪನಿಯು ಎರಡಂಕಿ ಅಭಿವೃದ್ಧಿಯನ್ನು ಸಾಧಿಸುತ್ತಿದ್ದು, ಪರೋಕ್ಷ ಹಾಗೂ ನೇರವಾಗಿ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಸುಮಾರು 50,000 ಉದ್ಯೋಗ ನಿರ್ಮಾಣ ಮಾಡಲಿದೆ ಎಂದು ಅವರು ಹೇಳಿದರು.
ಪೆಪ್ಸಿ ಕಂಪನಿಯು 1989ರಲ್ಲಿ ಭಾರತಕ್ಕೆ ಪ್ರವೇಶಿಸಿದ ನಂತರ, ಭಾರತದಲ್ಲಿ ನಾಲ್ಕನೇ ಅತಿ ದೊಡ್ಡ ಕಂಪನಿಯಾಗಿ ಪ್ರಸಿದ್ಧಿ ಪಡೆದಿದೆ.
|