ಸೆಪ್ಟೆಂಬರ್ 24ರಂದು ಬ್ಯಾಂಕ್ ನೌಕರರು ನೀಡಿದ್ದ ಮುಷ್ಕರದ ಕರೆ ಅನಗತ್ಯವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.
ಶಿವಗಂಗಾದಲ್ಲಿ ಬ್ಯಾಂಕ್ ಆಫ್ ಇಂಡಿಯಾ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಮುಷ್ಕರ ಅನಾವಶ್ಯಕವಾಗಿದ್ದು, ಬ್ಯಾಂಕ್ ಒಕ್ಕೂಟಗಳೊಂದಿಗೆ ಮಾತುಕತೆಗೆ ಸರಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.
ಅಮೆರಿಕದ ಹಣಕಾಸು ಸಂಸ್ಥೆಗಳ ದಿವಾಳಿತನದ ಕುರಿತಾಗಿ ಇದೇ ವೇಳೆ ಪ್ರತಿಕ್ರಿಯಿಸಿದ ಚಿದಂಬರಂ, ಭಾರತದ ಬ್ಯಾಂಕುಗಳ ಮೇಲೆ ಇದರ ಪ್ರಭಾವ ಅಷ್ಟೊಂದು ಇಲ್ಲದೇ ಇದ್ದು, ಬ್ಯಾಂಕುಗಳ ಸ್ಥಿತಿಯು ಭದ್ರವಾಗಿದೆ ಎಂದು ತಿಳಿಸಿದ್ದಾರೆ.
ಈ ನಡುವೆ, ಈ ವರ್ಷ ಮಾರ್ಚ್ 31ರವರೆಗೆ ಸುಮಾರು 12.51 ಲಕ್ಷ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
|