ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಲಯನ್ಸ್‌ನಿಂದ ಶೇ.40ರಷ್ಟು ಇಂಧನ ಉತ್ಪಾದನೆ: ಅಂಬಾನಿ
ಅನಿಲ ಉತ್ಪಾದನೆಯಿಂದ ತನ್ನ ಲಾಭಾಂಶವನ್ನು ಹೆಚ್ಚಳಗೊಳಿಸಲು ರಿಲಯನ್ಸ್ ಇಂಡಸ್ಟ್ರೀಸ್ ಸಿದ್ಧವಾಗಿರುವುದರೊಂದಿಗೆ, ಅಕ್ಟೋಬರ್ 18 ರಿಂದ 24ರವರೆಗೆ ದೇಶದ ಇಂಧನ ಉತ್ಪಾದನೆಯ ಶೇ.40ರಷ್ಟು ಇಂಧನವನ್ನು ರಿಲಯನ್ಸ್ ಇಂಡಸ್ಟ್ರೀಸ್ ಉತ್ಪಾದಿಸಲಿದೆ ಎಂದು ತಿಳಿಸಿದೆ.

2010ರೊಳಗೆ ಕೃಷ್ಣಾ ಗೋದಾವರಿ ಪ್ರದೇಶದ ಧೀರೂಬಾಯ್ 6 ( ಡಿ6) ಬ್ಲಾಕ್‌ನಿಂದ ತೈಲ ಮತ್ತು ಅನಿಲ ಉತ್ಪಾದನೆಯು 5,50,000 ಬಿಪಿಡಿ ಆಗಲಿದೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ಡಿ6 ಬ್ಲಾಕ್‌ನಲ್ಲಿ ತೈಲ ಉತ್ಪಾದನೆ ಪ್ರಾರಂಭವು ಕಂಪನಿಗೆ ಮಾತ್ರವಲ್ಲದೇ ಇಡೀ ದೇಶಕ್ಕೆ ಇದೊಂದು ಮಹತ್ವದ ಮೈಲಿಗಲ್ಲು ಎಂಬುದಾಗಿ ಕಂಪನಿಯು ಪರಿಗಣಿಸುತ್ತದೆ ಎಂದು ಅವರು ಹೇಳಿದ್ದಾರೆ.

ತೈಲ ಉತ್ಪಾದನೆಗೆ ಸಂಬಂಧಿಸಿದಂತೆ, ವಿಶ್ವದ ಮೊದಲ 20 ಸಮಗ್ರ ಕಂಪನಿಗಳಲ್ಲಿ ರಿಲಯನ್ಸ್ ಕೂಡಾ ಒಂದಾಗಿದೆ. ಅಲ್ಲದೆ, ರಿಲಯನ್ಸ್ ಆಳಸಮುದ್ರದಲ್ಲಿ ತೈಲ ಕ್ಷೇತ್ರದಲ್ಲಿ ತೈಲ ಉತ್ಪಾದನೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಪ್ರಾರಂಭವಾಗಬೇಕಾಗಿದ್ದ ವಾಣಿಜ್ಯ ಅನಿಲ ಉತ್ಪಾದನೆಯು 2009ರ ಮೊದಲ ತ್ರೈಮಾಸದಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಅಂಬಾನಿ ತಿಳಿಸಿದ್ದಾರೆ.
ಮತ್ತಷ್ಟು
ಬ್ಯಾಂಕ್ ಮುಷ್ಕರ ಅನಗತ್ಯ: ಚಿದಂಬರಂ
ಭಾರತದಲ್ಲಿ 500 ಮಿ.ಡಾ. ಬಂಡವಾಳ ಹೂಡಿಕೆ:ಪೆಪ್ಸಿ
ಕೆನರಾಬ್ಯಾಂಕ್: ವಿದೇಶಿ ಠೇವಣಿ ಬಡ್ಡಿದರ ಪರಿಷ್ಕರಣೆ
ರಿಲಯನ್ಸ್: ಶೀಘ್ರದಲ್ಲಿ ಕಚ್ಚಾ ತೈಲ ಉತ್ಪಾದನೆ
ಶೀಘ್ರವೇ ಆರ್ಥಿಕ ಸುಧಾರಣೆ ನೀತಿ ಜಾರಿ
ಡಾಲರ್‌ ಎದುರಿಗೆ ರೂಪಾಯಿ ಮೌಲ್ಯ ಕುಸಿತ