ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜರಾತ್‌‌ಗೆ 'ನ್ಯಾನೋ' : ಸಿಎಂ ಜೊತೆ ಮಾತುಕತೆ
PTI
ಪಶ್ಚಿಮಬಂಗಾಲದ ಸಿಂಗೂರಿನಲ್ಲಿರುವ ನ್ಯಾನೋ ಸ್ಥಾವರದ ವಿರುದ್ಧದ ಹಲವು ದಿನಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಿಂಗೂರಿನ ನ್ಯಾನೋ ಸ್ಥಾವರದ ಕಾರ್ಯವನ್ನು ಸ್ಥಗಿತಗೊಳಿಸಿರುವ ಟಾಟಾ ಮೋಟಾರ್ಸ್, ಗುಜರಾತಿನಲ್ಲಿ ನ್ಯಾನೋ ಕಾರ್ಯ ಪುನರ್‌ಸ್ಥಾಪನೆಯ ಕುರಿತಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದೆ.

ಮೋದಿ ಅವರ ಕಚೇರಿಯಲ್ಲಿ ನಡೆದ ಈ ಮಾತುಕತೆಯಲ್ಲಿ ಟಾಟಾ ಮೋಟಾರ್ಸ್ ಆಡಳಿತ ನಿರ್ದೇಶಕ ರವಿಕಾಂತ್ ನೇತೃತ್ವದ ಅಧಿಕಾರಿಗಳ ತಂಡ ಗುಜರಾತಿನಲ್ಲಿ ಯೋಜನೆ ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆಸಿತು.

ಸೆಪ್ಟೆಂಬರ್ ಎರಡರಂದು ಸಿಂಗೂರಿನಲ್ಲಿ ನ್ಯಾನೋ ಕಾರ್ಯ ಸ್ಥಗಿತಗೊಳಿಸುವುದಾಗಿ ಟಾಟಾ ಮೋಟಾರ್ಸ್ ಅಧಿಕೃತವಾಗಿ ಘೋಷಿಸಿದ ನಂತರ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ವಿಶ್ವದ ಅಗ್ಗದ ಕಾರು ನಿರ್ಮಾಣ ಸ್ಥಾವರ ಸ್ಥಾಪನೆಗೆ ಆಹ್ವಾನಿಸಿದ್ದವು.

ಮೋದಿ ಅವರೊಂದಿಗೆ ನಡೆದ ಮಾತುಕತೆಯ ವಿವರಗಳನ್ನು ಬಹಿರಂಗಗೊಳಿಸಲಾಗಿಲ್ಲದಿದ್ದರೂ, ಮೂವತ್ತು ನಿಮಿಷಗಳ ಮಾತುಕತೆಯಲ್ಲಿ ಸ್ಥಾವರ ಮರು ನಿರ್ಮಿಸುವ ಸಂಭವನೀಯ ಸ್ಥಳವಾದ ಮುಂದ್ರಾದಲ್ಲಿ ಯೋಜನೆಯನ್ನು ಮರುಪ್ರಾರಂಭಿಸಲು ಟಾಟಾ ಮೋಟಾರ್ಸ್ ಅಧಿಕಾರಿಗಳು ಆಸಕ್ತಿ ತೋರಿರುವುದಾಗಿ ಮೂಲಗಳು ತಿಳಿಸಿವೆ.
ಮತ್ತಷ್ಟು
ರಿಲಯನ್ಸ್‌ನಿಂದ ಶೇ.40ರಷ್ಟು ಇಂಧನ ಉತ್ಪಾದನೆ: ಅಂಬಾನಿ
ಬ್ಯಾಂಕ್ ಮುಷ್ಕರ ಅನಗತ್ಯ: ಚಿದಂಬರಂ
ಭಾರತದಲ್ಲಿ 500 ಮಿ.ಡಾ. ಬಂಡವಾಳ ಹೂಡಿಕೆ:ಪೆಪ್ಸಿ
ಕೆನರಾಬ್ಯಾಂಕ್: ವಿದೇಶಿ ಠೇವಣಿ ಬಡ್ಡಿದರ ಪರಿಷ್ಕರಣೆ
ರಿಲಯನ್ಸ್: ಶೀಘ್ರದಲ್ಲಿ ಕಚ್ಚಾ ತೈಲ ಉತ್ಪಾದನೆ
ಶೀಘ್ರವೇ ಆರ್ಥಿಕ ಸುಧಾರಣೆ ನೀತಿ ಜಾರಿ