ಲಾರ್ಸನ್ ಆಂಡ್ ಟರ್ಬೋ, ಜೆಎಸ್‌ಡಬ್ಲ್ಯು, ಬೆಂಗಾಲ್ ಸ್ಟೀಲ್, ಅನ್ಸಲ್ ಪ್ರಾಪರ್ಟೀಸ್ ಮತ್ತು ಭಾರತ್ ಫೋರ್ಜ್ ಸೇರಿದಂತೆ 27 ಪ್ರಸ್ತಾಪಿತ ವಿಶೇಷ ಆರ್ಥಿಕ ವಲಯಗಳಿಗೆ(ಎಸ್ಇಜೆಡ್) ಕೇಂದ್ರವು ಹಸಿರು ನಿಶಾನೆ ನೀಡಿದೆ.
ವಾಣಿಜ್ಯ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ನೇತೃತ್ವದ ಅನುಮೋದನಾ ಸಮಿತಿಯು(ಬಿಒಎ) 17 ಎಸ್ಇಜೆಡ್‌ಗಳಿಗೆ ಅಧಿಕೃತ ಅನುಮೋದನೆ ಮತ್ತು ಹತ್ತು ತೆರಿಗೆಮುಕ್ತ ವಲಯಗಳಿಗೆ ತತ್ವಶಃ ಅನುಮೋದನೆ ನೀಡಿದೆ.
ಅಧಿಕೃತ ಅನುಮೋದನೆ ಪಡೆಯುವ ವಿಶೇಷ ಆರ್ಥಿಕ ವಲಯಗಳಲ್ಲಿ ಹರಿಯಾಣದ ಓರಿಯೆಂಟ್ ಕ್ರಾಫ್ಟ್ ಇನ್ಫ್ರಾಸ್ಟ್ರಕ್ಚರ್, ಪಶ್ಚಿಮ ಬಂಗಾಲದಲ್ಲಿ ಜೆಎಸ್‌ಡಬ್ಲ್ಯುವಿನ ಬಹು ಉತ್ಪನ್ನ ವಲಯ ಮತ್ತು ಮಹಾರಾಷ್ಟ್ರದ ಭಾರತ್ ಫೋರ್ಜ್ ವಿಶೇಷ ಆರ್ಥಿಕ ವಲಯಗಳೂ ಒಳಗೊಂಡಿವೆ.
ಸ್ಕಿಲ್ ಇನ್ಫ್ರಾಸ್ಟ್ರಕ್ಚರ್ ಲಿ.ನ ಹಿಮಾಚಲ ಪ್ರದೇಶದ ವಿಮಾನ ನಿಲ್ದಾಣ ಆಧಾರಿತ ಬಹು ಉತ್ಪನ್ನ ಎಸ್ಇಜೆಡ್ ಮತ್ತು ಲಾರ್ಸನ್ ಆಂಡ್ ಟರ್ಬೋ ಶಿಪ್‌ಬಿಲ್ಡಿಂಗ್ ಲಿ.ನ ತಮಿಳುನಾಡಿನಲ್ಲಿನ ಹೆವಿ ಇಂಜಿನಿಯರಿಂಗ್ ತೆರಿಗೆ ಮುಕ್ತ ವಲಯಕ್ಕೆ ತತ್ವಶಃ ಅನುಮೋದನೆ ನೀಡಲಾಗಿದೆ.
|